ಬಂಟ್ವಾಳ : ನರಿಕೊಂಬು ಗ್ರಾಮ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣ ಆ. 16 ರಂದು ವರಮಹಾಲಕ್ಷ್ಮೀ ಹಬ್ಬದ ಸಲುವಾಗಿ ಭದ್ರಕಾಳಿ ಅಮ್ಮನವರ ಸಹಸ್ರನಾಮ ಪಠನೆ, ಕುಂಕುಮಾರ್ಚನೆ ನಡೆಯಿತು.
ತಂತ್ರಿಗಳಾದ ಕೇಶವ ಶಾಂತಿ ವೈದಿಕ ವಿಧಿ ನೆರವೇರಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ರಾಜ್ ಬಂಟ್ವಾಳ್, ಪದಾಧಿಕಾರಿಗಳಾದ ಮನೋಜ್ ಕೇದಿಗೆ, ಕಿಶೋರ್ ಕಲ್ಯಾಣ ಅಗ್ರಹಾರ, ಸಂಜೀವ ಸಪಲ್ಯ ಕೇದಿಗೆ, ಪ್ರೇಮನಾಥ ಶೆಟ್ಟಿ , ರಘು ಸಪಲ್ಯ ಸಹಿತ ಇತರ ಪ್ರಮುಖರು ಉಪಸ್ಥಿತರಿದ್ದರು.