ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫೆ.5ರಂದು ಸಂವಿಧಾನ ಜಾಗೃತಿ ಜಾಥ ಸಂಚರಿಸಿತು.

ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಜಾಥವನ್ನು ಉದ್ಘಾಟಿಸಿದರು.

ಹಿಂದುಳಿದ ವರ್ಗಗಳ ತಾಲೂಕು ಅಧಿಕಾರಿ ಶ್ರೀಮತಿ ಬಿಂದಿಯೋ ಅವರು ಸಂವಿಧಾನ ಪೀಠಿಕೆ ಓದಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮೋಹಿನಿ ಹಾಗೂ ಪಿ.ಡಿ.ಒ. ಹರೀಶ್, ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸಿ.ಎಚ್. ಓ. ಸಾರ್ವಜನಿಕರು ಉಪಸ್ಥಿತರಿದ್ದು ಜಾಗೃತಿ ಜಾಥವನ್ನು ಯಶಸ್ವಿ ಗೊಳಿಸಲಾಯಿತು.