ಬಂಟ್ವಾಳ : ನಾರಾಯಣಗುರುಗಳ ಸಂದೇಶ ಇಂದಿನ ಯುವ ಸಮುದಾಯಕ್ಕೆ ಸ್ಫೂರ್ತಿದಾಯಕ ಬೆಳಕಾಗಿದೆಯೆಂದರೆ ಅದು ಅತಿಶಯೋಕ್ತಿಯಲ್ಲ. ಅವರು ಬೋಧಿಸಿದ ತಾತ್ವಿಕತೆ, ಸಮಾನತೆ, ಸಹಾನುಭೂತಿ, ಮತ್ತು ಮಾನವೀಯತೆ — ಇವೆಲ್ಲವೂ ಇಂದು ಯುವಕರು ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಮಾರ್ಗದರ್ಶನ ನೀಡುವ ಬೆಳಕುಗಳಾಗಿವೆ. ಇದನ್ನೂ ಓದಿ :ವಿಶ್ವ ತಂಬಾಕು ವಿರೋಧಿ ದಿನದ ಅಂಗವಾಗಿ ಬೃಹತ್ ಜಾಗೃತಿ ಕಾರ್ಯಕ್ರಮ

ಗುರುಗಳ ಪ್ರಬಲ ನುಡಿ “ಏಕ ಜಾತಿ, ಏಕ ಧರ್ಮ, ಏಕ ದೇವ” ಎಂಬುದು ಯಾವುದೇ ವಿಭಜನೆಗೆ ವಿರುದ್ಧವಾಗಿ ಒಗ್ಗಟ್ಟನ್ನು ಪ್ರತಿಪಾದಿಸುತ್ತದೆ. ಈ ಸಂದೇಶ, ವಿಭಿನ್ನ ಹಿನ್ನೆಲೆಗಳಿಂದ ಬಂದಿರುವ ಯುವಕರಲ್ಲಿ ಸಹಭಾವನೆ ಬೆಳೆಸಲು ಅತ್ಯಂತ ಸೂಕ್ತವಾಗಿದೆ. ಇಂದಿನ ತಂತ್ರಜ್ಞಾನ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ವ್ಯಕ್ತಿತ್ವ, ಸಂವೇದನೆ, ಮತ್ತು ಮೌಲ್ಯಗಳ ಅಗತ್ಯ ಹೆಚ್ಚಾಗಿದೆ ನಾರಾಯಣಗುರು ಬೋಧಿಸಿದ ಸಿದ್ಧಾಂತಗಳು ಇದಕ್ಕೆ ಆಧಾರ ಶಿಲೆಗಳಾಗಿ ನಿಂತಿವೆ ಎಂದು ಕಾರಾಜೆಯ ಪುರುಷೋತ್ತಮ ಪೂಜಾರಿಯವರು ತಿಳಿಸಿದರು. ಇದನ್ನೂ ಓದಿ : ಪ್ರಧಾನಮಂತ್ರಿಗಳಿಂದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಭೇಟಿ

ಅವರು ಯುವವಾಹಿನಿ ಬಂಟ್ಟಾಳ ಘಟಕದ ಸದಸ್ಯ ನವೀನ್ ಪೂಜಾರಿ ಕಾರಾಜೆ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 47 ನೇ ಮಾಲಿಕೆಯಲ್ಲಿ ಗುರು ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ಯುವವಾಹಿನಿ ಘಟಕದ ನಿರ್ದೇಶಕ ಮಹೇಶ್ ಬೊಳ್ಳಾಯಿ, ಭಜಕರಾದ ವಿನಯ್ ಆಚಾರ್ಯ, ಮಾಜಿ ಅಧ್ಯಕ್ಷರಾದ ರಾಜೇಶ್ ಸುವರ್ಣ, ನಾಗೇಶ್ ಪೊನ್ನೊಡಿ, ಪ್ರೇಮನಾಥ್ ಕರ್ಕೇರ, ಸದಸ್ಯರಾದ ಪ್ರಶಾಂತ್ ಏರಮಲೆ, ಯತೀಶ್ ಬೊಳ್ಳಾಯಿ, ನಾಗೇಶ್ ಏಲಬೆ, ಶೈಲೇಶ್ ಕುಚ್ಚಿಗುಡ್ಡೆ, ವಿಘ್ನೇಶ್ ಬೊಳ್ಳಾಯಿ, ಮತ್ತಿತರರು ಉಪಸ್ಥಿತರಿದ್ದರು.ಇದನ್ನೂ ಓದಿ :  ವಿಧಾನಸೌಧದ‌ ಸಮ್ಮೇಳನ ಸಭಾಂಗಣದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ‌‌ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ

ಭಜನಾ ಸಂಕೀರ್ತನಾ ಸೇವೆಯಲ್ಲಿ ಹಾರ್ಮೋನಿಯಂ ವಾದಕರಾಗಿ ರಾಜೇಶ್ ಅಮ್ಟೂರು ಮತ್ತು ತಬಲಾ ದಲ್ಲಿ ಸಾತ್ವಿಕ್ ದೇರಾಜೆ ಸಹಕರಿಸಿದರು.

ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.