ಬಂಟ್ವಾಳ : ನಾರಾಯಣ ಗುರುಗಳ ಬದುಕೇ ಸನಾತನ ಧರ್ಮದಂತಿದ್ದು, ಅವರ ಸೇವಾ ವ್ಯಾಪ್ತಿ ವಿಶಾಲವಾಗಿತ್ತು. ಚಿಂತನೆಗಳು ಅಮೂಲ್ಯವಾಗಿದ್ದವು. ಯಾವುದೇ ಲೋಪ ದೋಷಗಳಿರದ ಜನಪರ ಕಾಳಜಿ ಇಂದಿನ ಯುವಕರಿಗೆ ಸ್ಪೂರ್ತಿ, ಪೂಜೆಗಿಂತ ತನ್ನ ಸಂದೇಶ ಪಾಲಿಸುವುದೇ ಮುಖ್ಯ ಎಂದು ತಲಶ್ಯೇರಿಯದಲ್ಲಿ ಗುರುಗಳು ಜೀವಂತವಿರುವಾಗಲೆ ಅವರ ಶಿಷ್ಯರು ಪ್ರತಿಷ್ಟಾಪಿಸಿದ ಪಂಚಲೋಹದ ಮೂರ್ತಿಯನ್ನು ನೋಡಿ ಗುರುಗಳು ಅಭಿಪ್ರಾಯ ಪಟ್ಟರು ಎಂದು ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ತಿಳಿಸಿದರು.

ಅವರು ಬಂಟ್ಟಾಳ ತಾಲೂಕಿನ ವಗ್ಗ ನಿವೇದಿತಾ ಜಗದೀಶ್ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 21 ರಲ್ಲಿ ಗುರುಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಧನುಷ್ ಮಧ್ವ, ಮಧುಸೂದನ್ ಮಧ್ವ, ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕೆ, ಅರುಣ್ ಕುಮಾರ್ ,ಸದಸ್ಯರಾದ ಪ್ರಶಾಂತ್ ಏರಮಲೆ, ನಾಗೇಶ್ ಏಲಬೆ, ಸುದೀಪ್ ರಾಯಿ, ಯತೀಶ್ ಬೊಳ್ಳಾಯಿ, ಯಶೋಧರ ಕಡಂಬಳಿಕೆ, ಮತ್ತಿತರರು ಉಪಸ್ಥಿತರಿದ್ದರು.

ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ವಂದಿಸಿದರು.