ಬಂಟ್ವಾಳ : ನಾರಾಯಣ ಗುರುಗಳು ಪ್ರತಿಪಾದಿಸಿದ ಬದುಕು, ಸಂಘಟನೆ, ಕೆಲಸಗಳ ಮೂಲಕ ಸಾಮಾಜಿಕ ತತ್ವಶಾಸ್ತ್ರವನ್ನು ಅರ್ಥಮಾಡಿಕೊಳ್ಳಬೇಕಾದ ಅಗತ್ಯತೆ ಇಂದು ಪ್ರತಿಯೊಬ್ಬರಿಗೂ ಇದೆ. ಮನುಷ್ಯ ಧರ್ಮ, ಮನುಷ್ಯ ಜಾತಿಯ ತತ್ವಶಾಸ್ತ್ರಕ್ಕೆ ಮಹತ್ವ ನೀಡಿದ ಗುರುಗಳು ಅಶಕ್ತರ ಬಾಳಿನಲ್ಲಿ ಬೆಳಕಿನ ಜ್ಯೋತಿಯಾದರು ಎಂದು ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ತಿಳಿಸಿದರು.
ಅವರು ದಿಶಾ ಕೊಟ್ಯಾನ್ ಗುಂಡೂರು ಕಲ್ಲಡ್ಕ ಇವರ ಮನೆಯಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ಗುರುತತ್ವವಾಹಿನಿಯ 27 ಮಾಲಿಕೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ಆರೋಗ್ಯ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕೆ, ಶಿವಾನಂದ ಎಂ, ಅರುಣ್ ಕುಮಾರ್, ಸದಸ್ಯರಾದ ಹರೀಶ್ ಅಜೆಕಲಾ , ವಿಘ್ನೇಶ್ ಬೊಳ್ಳಾಯಿ, ಯತೀಶ್ ಬೊಳ್ಳಾಯಿ, ಶೈಲೇಶ್ ಕುಮಾರ್ ಕುಚ್ಚಿಗುಡ್ಡೆ, ಜಗದೀಶ್ ಸುವರ್ಣ ಕಲ್ಲಡ್ಕ, ಸುನೀತಾ ನಿತಿನ್ ಮಾರ್ನಬೈಲ್, ರಚನಾ ಕರ್ಕೇರ, ಸೂರಜ್ ತುಂಬೆ, ದೀಪಾ ಕೊಟ್ಯಾನ್,ಮತ್ತಿತರರು ಉಪಸ್ಥಿತರಿದ್ದರು.
ಯುವವಾಹಿನಿ ಬಂಟ್ಟಾಳ ಘಟಕದ ಅಧ್ಯಕ್ಷರಾದ ದಿನೇಶ್ ಸುವರ್ಣ ರಾಯಿ ಸ್ವಾಗತಿಸಿ, ವಂದಿಸಿದರು.