ಬಂಟ್ವಾಳ : ನಾರಾಯಣಗುರು ತತ್ವಶ್ರೇಣಿಯಲ್ಲಿ ಧಾರ್ಮಿಕ ಆಯಾಸಕ್ಕೆ ಮೀರಿದ ಮಾನವೀಯ ಮೌಲ್ಯಗಳಿಗೆ ಒತ್ತುಕೊಟ್ಟರು. ನಾರಾಯಣಗುರು ಅವರ ತತ್ವಶ್ರೇಣಿಯಲ್ಲಿ ಆಧ್ಯಾತ್ಮಿಕತೆ ಮತ್ತು ಮಾನವೀಯ ಮೌಲ್ಯಗಳ ಪ್ರಜ್ಞೆ ಪ್ರಮುಖ ಸ್ಥಾನವನ್ನು ಹೊಂದಿತ್ತು. ಅವರು ಧಾರ್ಮಿಕ ಆಚರಣೆಗಳ ಗಡಿಗಳನ್ನು ಮೀರಿ, ಆಧ್ಯಾತ್ಮಿಕತೆಯನ್ನು ವ್ಯಕ್ತಿಯ ಶ್ರೇಷ್ಠತೆಯ ನಿಜವಾದ ಮೂಲವೆಂದು ಪರಿಗಣಿಸಿದರು ಎಂದು ಗುರುಸಂದೇಶ ನೀಡಿದ ಲೋಹಿತ್ ಕನಪಾದೆ ತಿಳಿಸಿದರು.

ಅವರು ದಿನಾಂಕ‌ 23.01.2025ರಂದು ಯುವವಾಹಿನಿ ಬಂಟ್ಟಾಳ ಘಟಕದ ಸದಸ್ಯರಾದ ಸಚಿನ್ ಕೊಡ್ಮಾಣ್ ಇವರ ಮನೆಯಲ್ಲಿ ಜರುಗಿದ ಗುರುತತ್ವವಾಹಿನಿ ಮಾಲಿಕೆ 29 ರಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ನಾಯ್ಕ ಕೊಡ್ಮಾನ್ ಕೋಡಿ, ಹಾಗೂ ನಾಟಿ ವೈದ್ಯ, ವಾಸ್ತು ಶಿಲ್ಪಿ ಹವ್ಯಾಸಿ ಭಾಗವತರು ಈಶ್ವರ ಪೂಜಾರಿ ಕಲಾಯಿ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಧನುಷ್ ಮದ್ವ,ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕೆ, ಶಿವಾನಂದ ಎಂ, ಅರುಣ್ ಕುಮಾರ್, ರಾಜೇಶ್ ಸುವರ್ಣ, ಸದಸ್ಯರಾದ ಹರೀಶ್ ಸಾಲ್ಯಾನ್ ಅಜೆಕಲ , ಯತೀಶ್ ಬೊಳ್ಳಾಯಿ, ಪ್ರಶಾಂತ್ ಏರಮಲೆ, ಯಶೋಧರ ಕಡಂಬಳಿಕೆ, ಮತ್ತಿತರರು ಉಪಸ್ಥಿತರಿದ್ದರು.

ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ವಂದಿಸಿದರು.