ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾ.10ರಂದು ದೆಹಲಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ (MoPNG) ಕಾರ್ಯದರ್ಶಿ ಶ್ರೀ ಪಂಕಜ್ ಜೈನ್ ಅವರನ್ನು ಭೇಟಿಯಾದರು.
ಮಂಗಳೂರಿನಲ್ಲಿರುವ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್(ISPRL )ನಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ರಚನಾತ್ಮಕವಾದ HR ಪಾಲಿಸಿ (ಮಾನವ ಸಂಪನ್ಮೂಲ ನೀತಿ)ಯ ಅಗತ್ಯತೆಯ ಕುರಿತು ಮಾತುಕತೆ ನಡೆಸಿ ಮನವಿ ಸಲ್ಲಿಸಿ , ಕಳೆದ ಎಂಟು ವರ್ಷಗಳಿಂದ ಬಾಕಿ ಇರುವ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು ಅಗತ್ಯ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.
ಬಾಧಿತ ಉದ್ಯೋಗಿಗಳಿಗೆ ಸರಿಸಮಾನವಾದ ವೇತನ, ಭತ್ಯೆಗಳು ಮತ್ತು ಭಡ್ತಿ ಇತ್ಯಾದಿ ವಿಚಾರವಾಗಿ ಇರುವ ಗೊಂದಲಗಳಿಗೆ ನಿವಾರಣೋಪಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.