ಪ್ರಪಂಚಕ್ಕೆ ಕೊರೋನಾ ಕೊಟ್ಟು ಜನರ ಜೀವನವನ್ನೇ ಹಾಳು ಮಾಡಿದ ಚೀನಾ ಇದೀಗ ಇನ್ನೊಂದು ಮಾರಕ ಅಸ್ತ್ರವನ್ನ ಪ್ರಪಂಚಕ್ಕೆ ನೀಡೋದಕ್ಕೆ ಹೊರಟಿದೆ. ಅದುವೇ ʻಸೊಳ್ಳೆ ಗಾತ್ರದ ಡ್ರೋನ್‌ʼಗಳು (Mosquito Drone). ಹೌದು ಚೀನಾದ ವಿಜ್ಞಾನಿಗಳು ಈಗ ಸೊಳ್ಳೆ ಗಾತ್ರದ ಮಿಲಿಟರಿ ಡ್ರೋನ್‌ಗಳನ್ನ ತಯಾರಿಸಿದ್ದಾರೆ. ಇದರ ಗಾತ್ರ 1.3 ಸೆಂಟಿಮೀಟರ್.

ಇರಾನ್ ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿ ಇಂತಹ ವಿಷಯ ಬಹಿರಂಗಗೊಂಡಿರುವುದು ಮತ್ತಷ್ಟು ಆತಂಕಕ್ಕೆ ದೂಡಿದೆ. ಚೀನಾದ ಹುನಾನ್ ಪ್ರಾಂತ್ಯದಲ್ಲಿರುವ (ಎನ್‌ಯುಡಿಟಿ) ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯದ ರೊಬೋಟಿಕ್ಸ್ ಲ್ಯಾಬ್ ಈ ಮೈಕ್ರೋ ಡ್ರೋನ್‌ಗಳನ್ನ ತಯಾರಿಸಿರೋದು.  ಇದನ್ನೂ ಓದಿ : ಇರಾನ್‌, ಇಸ್ರೇಲ್‌ ಸಂಘರ್ಷ – ಭಾರತದ ಬಂದರುಗಳಲ್ಲಿ ಉಳಿದ 1 ಲಕ್ಷ ಟನ್ ಬಾಸ್ಮತಿ ಅಕ್ಕಿ

ಈ ಡ್ರೋನ್‌ಗಳಿಗೆ ಸೊಳ್ಳೆಯ ರೀತಿಯಲ್ಲೇ ತೆಳುವಾದ ರೆಕ್ಕೆಗಳಿವೆ. ಕೂದಲಿನಷ್ಟು ತೆಳುವಾದ ಕಾಲುಗಳಿವೆ. ಮೊಬೈಲ್ ಮೂಲಕ ಇದನ್ನ ನಿಯಂತ್ರಿಸಬಹುದು. ಈ ಡ್ರೋನ್ ಕಣ್ಗಾವಲಿನ ರೀತಿ ಕೆಲಸ ನಿರ್ವಹಿಸುತ್ತೆ. ಯುದ್ಧದ ಸಂದರ್ಭದಲ್ಲಿ ಶತ್ರುಗಳಿಗೆ ಗೊತ್ತಾಗದಂತೆ ಶತ್ರುವಿನ ಚಲನವಲನ ತಿಳಿಯಲು ಸಹಾಯಕವಾಗುತ್ತೆ.

ಆದ್ರೆ, ಈ ಡ್ರೋನ್‌ಗಳು ಹೆಚ್ಚು ಬ್ಯಾಟರಿ ಸಾಮರ್ಥ್ಯ ಇಲ್ಲದೇ ಇರುವುದರಿಂದ ಹೆಚ್ಚು ದೂರ ಸಾಗಲು ಕಷ್ಟವಾಗಬಹುದು ಎನ್ನುತ್ತಾರೆ ತಜ್ಞರು. ಇದನ್ನೂ ಓದಿ :  ಇರಾನ್‌, ಇಸ್ರೇಲ್‌ ಸಂಘರ್ಷ – ಭಾರತದ ಬಂದರುಗಳಲ್ಲಿ ಉಳಿದ 1 ಲಕ್ಷ ಟನ್ ಬಾಸ್ಮತಿ ಅಕ್ಕಿ