ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಡಿ ಯೋಜನೆ ಕಲ್ಲಡ್ಕ ವಲಯದ ಶೌಯ೯ ವಿಪತ್ತು ನಿರ್ವಹಣಾ ತಂಡದ ಮಾಸಿಕ ಸಭೆ ಕಲ್ಲಡ್ಕ ವಲಯ ಕಚೇರಿಯಲ್ಲಿ ನಡೆಯಿತು.

ಯೋಜನೆಯ ಕಲ್ಲಡ್ಕ ಘಟಕದ ಅಧ್ಯಕ್ಷ ಮಾಧವ ಸಾಲ್ಯಾನ್ ಕುದ್ರೆಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ ಶೌರ್ಯ ತಂಡದ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಕಲ್ಲಡ್ಕ ವಲಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕಿ ವಿದ್ಯಾ, ಯೋಜನೆಯ ಕಲ್ಲಡ್ಕ ವಲಯ ಆಧ್ಯಕ್ಷೆ ತಂಡದ ಸದಸ್ಯೆ ತುಳಸಿ ಕೊಳಕೀರು, ತಂಡದ ಸದಸ್ಯರುಗಳಾದ ಗಣೇಶ್ ನೆಟ್ಲಾ, ಚಿನ್ನಾ ಕಲ್ಲಡ್ಕ, ಸಂತೋಷ್ ಬೊಳ್ಪೋಡಿ , ವೆಂಕಪ್ಪ, ರಮೇಶ್ ಕುದ್ರೆಬೆಟ್ಟು ಉಪಸ್ಥಿತರಿದ್ದರು.

ಮುಂದಿನ ಕಾರ್ಯಕ್ರವಾಗಿ ವೀರಕಂಬ ಗ್ರಾಮದ ಬೆಂಜಾನತಿಮರ್ ನಾಗರತ್ನ ಎನ್ನುವ ಒಂಟಿ ಮಹಿಳೆಯ ಮನೆ ಪರಿಸರ ಸ್ವಚ್ಛತೆ ಮಾಡುದೆಂದು ತೀರ್ಮಾನಿಸಲಾಯಿತು.