ವಿಧಾನಸೌಧದಲ್ಲಿ ಇಂದು ಪುರುಷರ ಕಿರಿಯರ ಹಾಕಿ ಪಂದ್ಯಾವಳಿಯ ವಿಶ್ವ ಕಪ್ ಟ್ರೋಪಿಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು  ಅತ್ಯಂತ ಸಂತೋಷದ ಜೊತೆಗೆ ಹೆಮ್ಮೆಯಿಂದ ಅನಾವರಣಗೊಳಿಸಿದರು.
ಬಳಿಕ ಮಾತನಾಡಿ ಇದೊಂದು ಐತಿಹಾಸಿಕ ಕ್ಷಣ, ಭಾರತವೇ ಈ ಬಾರಿಯ ಪುರುಷರ ಕಿರಿಯರ ಹಾಕಿ ವಿಶ್ವಕಪ್‌ನ ಆತಿಥ್ಯ ವಹಿಸಿದ್ದು, ಈ ಪಂದ್ಯಾಕೂಟದಲ್ಲಿ ಪಾಲ್ಗೊಳ್ಳುವ ಎಲ್ಲಾ ಯುವ ಕ್ರೀಡಾಳುಗಳಿಗೆ ಶುಭವಾಗಲಿ, ಕ್ರೀಡೆ ಗೆಲ್ಲಲಿ ಎಂದು ಹಾರೈಸಿದರು. ಇದನ್ನೂ ಓದಿ : ಯುವವಾಹಿನಿ ಬಂಟ್ವಾಳ ಘಟಕದ ಪ್ರೀಮಿಯರ್ ಲೀಗ್ ಕ್ರಿಕೆಟ್ ಸಂಪನ್ನ – ಬಿಲ್ಲವ ಫ್ರೆಂಡ್ಸ್ ದಿಂಡಿಕೆರೆ ಬೈದಶ್ರೀ 2025 ಚಾಂಪಿಯನ್
ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಕೆ.ಗೋವಿಂದರಾಜು, ಪದ್ಮಶ್ರೀ ಪುರಸ್ಕೃತ ಧನಂಜಯ್ ಪಿಳ್ಳೈ, ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಡಾ.ಎ.ಬಿ.ಸುಬ್ಬಯ್ಯ, ಕರ್ನಾಟಕ ಹಾಕಿ ಅಸೋಸಿಯೇಷನ್ ಕಾರ್ಯದರ್ಶಿಗಳಾದ ವಿ.ಆರ್.ರಘುನಾಥ್, ಶಾಸಕರಾದ ತರೀಕೆರೆ ಶ್ರೀನಿವಾಸ್, ಹಂಪನಗೌಡ ಸೇರಿದಂತೆ ಅನೇಕ ಗಣ್ಯರು ಈ ಸಂಭ್ರಮಕ್ಕೆ ಸಾಕ್ಷಿಯಾದರು.