ಮಾಣಿ ಮಹಾಶಕ್ತಿ ಕೇಂದ್ರ ವತಿಯಿಂದ ನಾಲ್ಕು ಗ್ರಾಮಗಳ (ಶಕ್ತಿಕೇಂದ್ರ) ಪಕ್ಷ ಪ್ರಮುಖರ ಸಭೆಯು ಇಂದು ಅನಂತಾಡಿಯ ದೇವಿ ಮಂದಿರದಲ್ಲಿ ನಡೆಯಿತು.

ನೇರಳಕಟ್ಟೆ ಕೃಷಿ ಪತ್ತಿನ ಸಹಕಾರಿ ಸಂಘ(ರಿ)ನೇರಳಕಟ್ಟೆ ಇದರ ಚುನಾವಣೆಯ ನಿಮಿತ್ತ ಈ ಸಭೆ ನಡೆದಿದ್ದು ಸಭೆಯ ಅಧ್ಯಕ್ಷತೆಯನ್ನು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಶ್ರೀ ಅರವಿಂದ ರೈ ವಹಿಸಿದ್ದರು.

ಬಿಜೆಪಿ ಮಂಡಲ ಅಧ್ಯಕ್ಷ ಶ್ರೀ ಚೆನ್ನಪ್ಪ ಕೋಟ್ಯಾನ್ ಉಪಸ್ಥಿತರಿದ್ದ ಸಭಾ ವೇದಿಕೆಯಲ್ಲಿ ಮಂಡಲ ಪ್ರ ಕಾರ್ಯದರ್ಶಿ ಶ್ರೀ ಶಿವಪ್ರಸಾದ್ ಶೆಟ್ಟಿ, ಜಿಲ್ಲಾ ಪ್ರಮುಖ ಶ್ರೀ ಮಾಧವ ಮಾವೆ,ಮಂಡಲ ಉಪಾಧ್ಯಕ್ಷ ಶ್ರೀ ಪುಷ್ಪರಾಜ್ ಚೌಟ,ಸಹಾಕಾರ ಪ್ರಕೋಷ್ಟ ಮಂಡಲ ಸಂಚಾಲಕ ಶ್ರೀ ಜಯರಾಮ ರೈ, ಮಹಾಶಕ್ತಿ ಕೇಂದ್ರ ಪ್ರ ಕಾರ್ಯದರ್ಶಿ ಶ್ರೀ ನಾಗೇಶ್ ಭಂಡಾರಿ ಆಸೀನರಾಗಿದ್ದರು.

ಸಭೆಯಲ್ಲಿ ಮಾಣಿ,ನೆಟ್ಲಮುಡ್ನೂರು ಗ್ರಾಮದ ಬಿಜೆಪಿ ಶಕ್ತಿಕೇಂದ್ರ ಪ್ರಮುಖರು,ಮಂಡಲ ಪದಾಧಿಕಾರಿಗಳು ಮತ್ತು ಬಿಜೆಪಿ ಮೋರ್ಚ ಪದಾಧಿಕಾರಿಗಳು, ಅನಂತಾಡಿ, ನೆಟ್ಲಮುಡ್ನೂರು, ಪೆರಾಜೆ ಗ್ರಾಮದ ಬೂತು ಸಮಿತಿ ಅಧ್ಯಕ್ಷರು,ಕಾರ್ಯದರ್ಶಿಗಳು, ನೆಟ್ಲಮುಡ್ನೂರು, ನೆಟ್ಲಮುಡ್ನೂರು ಗ್ರಾಮದ ಬಿಜೆಪಿ ಪಂಚಾಯತ್ ಸದಸ್ಯರು ಹಾಗೂ ನೇರಳಕಟ್ಟೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಸಹಕಾರ ಪ್ರಕೋಷ್ಟ ಬೆಂಬಲಿತ ಅಭ್ಯರ್ಥಿಗಳಾದ ಶ್ರೀ ತನಿಯಪ್ಪ ಗೌಡ,ಶ್ರೀ ಸನತ್ ಕುಮಾರ್ ರೈ,ಶ್ರೀ ರಾಘವ ಗೌಡ,ಶ್ರೀ ಶ್ರೀನಿವಾಸ ಪೂಜಾರಿ, ಶ್ರೀಮತಿ ಭಾರತಿ,ಶ್ರೀ ಸಂಕಪ್ಪ ಜೇ,ಶ್ರೀ ವೆಂಕಟೇಶ ಕೋಟ್ಯಾನ್,ಶ್ರೀ ನಾರಯಣ ಶೆಟ್ಟಿ, ಶ್ರೀ ಅಶೋಕ ರೈ ಹಾಗೂ ಪಕ್ಷದ ಜವಬ್ದಾರಿ ಹೊತ್ತಿರುವ ಹಲವಾರು ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.