ಮಹಿಳೆಯರು ಜಾಗ್ರತೆ ಆದ್ರೆ ಒಂದು ಮನೆ ಬೆಳಗಿದಂತೆ, ನಮ್ಮಲ್ಲಿ ಮಾನವೀಯತೆ ಗುಣದ ಕೊರತೆ ಎದ್ದು ಕಾಣುತ್ತೆ, ನಾವು ನಮ್ಮದು ಎನ್ನುವುದೇ ನಿಜವಾದ ಭಾರತೀಯತೆ, ಧಾರ್ಮಿಕ ಶ್ರದ್ಧಾ ಕೇಂದ್ರಗಳು ಉತ್ತಮ ಸಂಸ್ಕಾರ ಕಲಿಸುವ ತಾಣಗಳಾಗಲಿ ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಶ್ರೀ ವೀರಮಾರುತಿ ವ್ಯಾಯಮ ಶಾಲೆ ಟ್ರಸ್ಟ್ (ರಿ.)ಮಾರುತಿನಗರ ನರಿಕೊಂಬು ವತಿಯಿಂದ ನೂತನವಾಗಿ ನಿರ್ಮಿಸಿದ ವ್ಯಾಯಮಶಾಲೆ ಹಾಗೂ ಸಭಾಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಾಚನ ನೀಡಿದ ಮಾತನಾಡಿದರು.

ವ್ಯಾಯಮಶಾಲೆ ಹಾಗೂ ಸಭಾಭವನ ಲೋಕಾರ್ಪಣೆ ವೇದಮೂರ್ತಿ ರಾಜಗೋಪಾಲಾಚಾರ್ಯ ನರಿಕೊಂಬು ಅವರ ಪೌರೋಹಿತ್ಯದಲ್ಲಿ ನಡೆಯಿತು.

ಲೋಟಸ್ ಗ್ರೂಪ್ ಮಂಗಳೂರುನ ಜಿತೇ೦ದ್ರ ಎಸ್. ಕೊಟ್ಟಾರಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಮುದಾಯ ಭವನವನ್ನು ವೇದಮೂರ್ತಿ ಜನಾರ್ಧನ ವಾಸುದೇವ ಭಟ್ ಉದ್ಘಾಟಿಸಿದರು. ಎರಕಳ ದಿ| ಬಿ. ಗಣೇಶ ಸೋಮಯಾಜಿ ವೇದಿಕೆಯನ್ನು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ ಪಾಣೆಮಂಗಳೂರಿನ ಆಡಳಿತ ಮುಖ್ಯಸ್ಥ ಬಿ. ರಘುನಾಥ ಸ್ವಾಮೀಜಿ ಅನಾವರಣ ಗೊಳಿಸಿ ತಮ್ಮ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ವೀರ ಮಾರುತಿ ವ್ಯಾಯಾಮ ಶಾಲೆಯ ಇಬ್ಬರು ಸದಸ್ಯರುಗಳನ್ನು ದೇವಸ್ಥಾನದ ಟ್ರಸ್ಟಿಗಳಾಗಿ ನೇಮಿಸುವುದಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ವರ್ತಮಾನದ ಸಮಾಜದಲ್ಲಿ ಕೃತಜ್ಞತೆಮುಖ್ಯ ಒಳ್ಳೆ ಸಮಾಜ ಕಟ್ಟುವಲ್ಲಿ ಯುವಕರ ಪಾತ್ರ ಬಹಳ ಪ್ರಾಮುಖ್ಯತೆ ಪಡೆದಿದೆ, ವ್ಯಾಯಾಮ ಶಾಲಾ ಯುವಕರು ಸುಂದರ ಸಮಾಜ ನಿರ್ಮಾಣದ ಪಾತ್ರಧಾರಿಗಳಾಗಿ ಎಂದರು.

ಕಾರ್ಯಕ್ರಮದಲ್ಲಿ ವ್ಯಾಯಾಮ ಶಾಲೆಯ ಅಭಿವೃದ್ಧಿಗೆ ದುಡಿದ ಹಿರಿಯ ಸದಸ್ಯರಾದ ಆನಂದ ನಾಯ್ಕ್ ಮಾರುತಿನಗರ, ಅಶೋಕ್ ಟೈಲರ್ ಕರ್ಬೇಟ್ಟು, ಬಾಬು ಪೂಜಾರಿ ಕೋಡಿಮಾಜಲ್, ಕೃಷ್ಣಪ್ಪ ಡ್ರೈವರ್ ಮಾರುತಿನಗರ, ಮೋಹನ್ ಆಚಾರ್ಯ ಮಾರುತಿನಗರ, ಮಂಜುನಾಥ ನಾಯ್ಕ್ ಮಾರುತಿನಗರ, ಸುಖೀರ್ತಿ ಜೈನ್ ಮಣಿಮಜಲ್, ಜಯಾನಂದ ಸಫಲ್ಯ ಬಂಟ್ವಾಳ, ಪುರುಷೋತಮ ಎಸ್. ಮಣಿಮಜಲ್, ಸದಾನಂದ ಪೂಜಾರಿ ಕೋಡಿಮಜಲ್, ಪದ್ಮನಾಭ ಸಫಲ್ಯ ಮಾರುತಿನಗರ, ಪ್ರಭಾಕರ ಪೂಜಾರಿ ಕೋಡಿಮಜಲ್, ಸುಬ್ಬಣ್ಣ ನಾಯ್ಕ್ ಮಾರುತಿನಗರ, ಹಾಗೂ ಕ್ರೀಡಾಪಟು ಸಂತೋಷ್ ಮಣಿಮಜಲ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್, ಮೊಗರ್ನಾಡು ,ಜಗನಾಥ್ ಬಂಗೇರ ನಿರ್ಮಾಲ್, ಪದ್ಮನಾಭ ಮಯ್ಯ, ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಮಾದವ ಗೌಡ, ಹರೀಶ್ ಪುತ್ರೂಟ್ಟಿಬೈಲು, ಪಂಚಾಯತ್ ಸದಸ್ಯರುಗಳಾದ ಪ್ರಕಾಶ್ ಕೋಡಿಮಜಲು, ಶುಭ ಶಶಿಧರ್, ವೀರಮಾರುತಿ ವ್ಯಾಯಮ ಶಾಲೆ ಟ್ರಸ್ಟ್ (ರಿ.) ಅಧ್ಯಕ್ಷ ಚಂದ್ರಹಾಸ ಕೋಡಿಮಜಲು, ಮಹಿಳಾ ಮಂಡಳಿ ಆದ್ಯೆಕ್ಷೆ ಅನಿತಾ ಜೆ,ಮೊದಲದವರು ಉಪಸ್ಥಿತರಿದ್ದರು.

ಹಂಸಿನಿ ಹಾಗೂ ಮೋನಿಷಾ ಪ್ರಾರ್ಥಿಸಿ, ಕಟ್ಟಡ ನಿರ್ಮಾಣ ಸಮಿತಿಯ ಉಪಾಧ್ಯಕ್ಷ ಬಾಲಕೃಷ್ಣ ಮಣಿಮಜಲ್ ಸ್ವಾಗತಿಸಿ, ಕೋಶಾಧಿಕಾರಿ ಯಾದವ ಕುಲಾಲ್ ಪ್ರಸ್ತಾವಿಕ ಮಾಡಿ,ನಯನ ಯಾದವ್ ವಂದಿಸಿ, ರಾಜೇಜ್ ಕೊಟ್ಟರಿ ಕಲ್ಲಡ್ಕ ಕಾರ್ಯಕ್ರಮ ನೀರೂಪಿಸಿದರು.