ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಸ್.ಪಿ.ವೈ.ಎಸ್.ಎಸ್ ಯೋಗ ಸಮಿತಿಯಿಂದ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಕಾರ್ಯಕ್ರಮ ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮತ್ತು ಸುಬ್ರಮಣ್ಯ ಗಣೇಶ ಪ್ರಸಾದ ಅನುಗ್ರಹ ಎಜುಕೇಶನ್ ಟ್ರಸ್ಟ್ ನ ಮೊಹನ್ ರಾಮ್ ಎಸ್. ಸುಳ್ಳಿ, ಪುತ್ತೂರು ಎಸ್.ಪಿ.ವೈ.ಎಸ್.ಎಸ್ ತಾಲೂಕು ಸಂಚಾಲಕ ಯೋಗೀಶ್ ಆಚಾರ್ಯ,
ಬಂಟ್ವಾಳ ತಾಲೂಕು ಸಹ ಸಂಚಾಲಕಿ ನಯನಾ, ಉಪ್ಪಿನಂಗಡಿ ಯೋಗ ಶಿಕ್ಷಕ ಆನಂದ ಕುಂಟಿನಿ ದೀಪ ಪ್ರಜ್ವಲನೆ ಮಾಡಿದರು.
ಬೆಳಗ್ಗೆ 4.30 ರಿಂದ 7 ಗಂಟೆಯವರೆಗೆ ನಡೆದ ಕಾರ್ಯಕ್ರಮದಲ್ಲಿ, ವಿಟ್ಲ ಶಾಖೆಯ ಯೋಗ ಶಿಕ್ಷಕಿ ಮೈತ್ರಿ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.
3 ಹಂತದಲ್ಲಿ 6 ಸುತ್ತು ಯೋಗ ಷಣ್ಮುಖ ನಮಸ್ಕಾರವು ತಾಲೂಕು ಶಿಕ್ಷಣ ಪ್ರಮುಖರಾದ ಗಣೇಶ ಸುವರ್ಣ ನೇತೃತ್ವದಲ್ಲಿ ನಡೆಯಿತು.
ಯೋಗ ಶಿಕ್ಷಕರಾದ ಸಂತೋಷ, ಉಪ್ಪಿನಂಗಡಿ ಶಾಖೆ , ಪುತ್ತೂರು ನಗರ ಶಿಕ್ಷಣ ಪ್ರಮುಖ ಅಶೋಕ, ಸುನಂದ ಶೆಟ್ಟಿ, ಸುಳ್ಯ ಶಾಖೆ ಇವರು ನಗರದ ಯೋಗ ಬಂಧುಗಳ ಪ್ರಾತ್ಯಕ್ಷಿಕೆಯೊಂದಿಗೆ ಯೋಗ ಷಣ್ಮುಖ ನಮಸ್ಕಾರ ಮಾಡಿಸಿದರು. ಅಮೃತಾಸನವನ್ನು ಪುತ್ತೂರು ನಗರದ ಯೋಗಶಿಕ್ಷಕ ಕೃಷ್ಣಾನಂದ ನಾಯಕ್ ನಡೆಸಿಕೊಟ್ಟರು.
ಕಾಸರಗೋಡು, ಸುಳ್ಯ ಮಂಗಳೂರು, ಸುರತ್ಕಲ್, ಮೂಲ್ಕಿ ಪುತ್ತೂರು, ಬಂಟ್ವಾಳ, ವಿಟ್ಲ, ಮಂಜೇಶ್ವರ, ಪೋಳಲಿ, ಉಳ್ಳಾಲ, ಕಲ್ಲಡ್ಕದಿಂದ ಮೂರು ಸಾವಿರಕ್ಕೂ ಹೆಚ್ಚಿನ ಯೋಗಪಟುಗಳು ಸಾರ್ವಜನಿಕರೊಂದಿಗೆ ಭಕ್ತಿಭಾವದಿಂದ ದೇವಳದ ರಥಬೀದಿಯಲ್ಲಿ ಮುಂಜಾನೆ 4:00 ರಿಂದ ಅತ್ಯಂತ ಶಿಸ್ತುಬದ್ಧವಾಗಿ ಸಾಲಾಗಿ ಕುಳಿತು ತನ್ಮಯತೆಯಿಂದ ಭಾಗವಹಿಸಿ ಕೊಂಡು ಯೋಗ ಷಣ್ಮುಖ ನಮಸ್ಕಾರ ಮಾಡಿದರು.
ಶನಿವಾರ ಸಂಜೆ ಸುರಿದ ಬಾರಿ ಮಳೆಯಿಂದ ರಥಬಿದಿ ಸಂಪೂರ್ಣ ಸ್ವಚ್ಚವಾಗಿ ತೊಳೆದುಹೋಗಿ ಯೋಗ ಷಣ್ಮುಖ ನಮಸ್ಕಾರಕ್ಕೆ ಪ್ರಕೃತಿಯೂ ತನ್ನ ಸಹಕಾರ ನೀಡಿ ಯೋಗಪಟುಗಳನ್ನು ಸ್ವಾಗತಿಸಿತು.
ಪ್ರಾಂತ, ವಲಯ, ಜಿಲ್ಲಾ, ತಾಲೂಕು, ನಗರ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕರಾದ ಪ್ರಭಾಕರ, ಯೋಗ ಶಿಕ್ಷಕರು ಸುಬ್ರಮಣ್ಯ ಶಾಖೆ ವಂದನಾರ್ಪಣೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು. ವಿಟ್ಲ ಯೋಗ ಶಿಕ್ಷಕಿ ಮಾದುರಿ ಕಾರ್ಯಕ್ರಮ ನಿರೂಪಣೆ ಮಾಡಿದರು.