ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ಸಾಮೂಹಿಕ ಹುಟ್ಟುಹಬ್ಬ ಮತ್ತು ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಪ್ರೌಢ ಶಾಲೆಯ ಮುಖ್ಯೋಪಾಧ್ಯಾರಾದ ಗೋಪಾಲ ಎಂ. ಮಾತನಾಡಿ ಪಾಶ್ಚ್ಯತೀಯ ಸಂಸ್ಕ್ರತಿಗೆ ಮಾರು ಹೋಗಿರುವ ಇಂದಿನ ಸಂಸ್ಕೃತಿಯನ್ನು ಹೋಗಲಾಡಿಸಿ ಹಿಂದೂ ಸಂಸ್ಕೃತಿಯ ಮೂಲಕ ದೀಪ ಬೆಳಗಿಸಿ, ಹಿರಿಯರಿಂದ ತಿಲಕಧಾರಣೆ ಮತ್ತು ಗುರುಹಿರಿಯರ ಆಶೀರ್ವಾದದೊಂದಿಗೆ ಹುಟ್ಟು ಹಬ್ಬಆಚರಣೆ ಮಾಡಬೇಕೆಂದು” ತಿಳಿಸಿದರು.

ಪ್ರೌಢಶಾಲೆಯಹಿರಿಯ ವಿದ್ಯಾರ್ಥಿ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರು, ಕುದುರೆಬೆಟ್ಟು ಮಣಿಕಂಠ ಭಜನಾ ಮಂದಿರದ ಅಧ್ಯಕ್ಷರಾದ ಲೋಕಾನಂದ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಪ್ರೇಮ ಲೋಕಾನಂದ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಏಪ್ರಿಲ್, ಮೇ ಮತ್ತುಜೂನ್ ತಿಂಗಳಲ್ಲಿ ಹುಟ್ಟುಹಬ್ಬಆಚರಿಸುವ ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಸಮರ್ಪಣಾ ನಿಧಿಯನ್ನು ಅರ್ಪಿಸಿ, ಅತಿಥಿಗಳಿಂದ ತಿಲಕಧಾರಣೆ ಮತ್ತು ಆಶೀರ್ವಾದ ಪಡೆದುಕೊಂಡರು.

ಕಾರ್ಯಕ್ರಮವನ್ನುಅAಕಿತ ನಿರೂಪಿಸಿ, ಚೇತನ ಸ್ವಾಗತಿಸಿ, ಸಮೀಕ್ಷ ವಂದಿಸಿ, ಶಾಂತಿಮಂತ್ರದೊಂದಿಗೆಕೊನೆಗೊಂಡಿತು.