ಮಂಗಳೂರು: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದ.ಕ. ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರ ಅಧ್ಯಕ್ಷತೆಯಲ್ಲಿ ನ.12 ರಂದು ನಡೆದ ಎಂ.ಆರ್.ಪಿ.ಎಲ್ ನ 4ನೇ ಹಂತದ ಯೋಜನೆಗಾಗಿ ಮಂಗಳೂರು ತಾಲೂಕಿನ ಕುತ್ತೆತ್ತೂರು, ಪೆರ್ಮುದೆ, ತೆಂಕ ಎಕ್ಕಾರು, ಕಂದಾವರ ಮತ್ತು ಮೂಳೂರು ಗ್ರಾಮಗಳಲ್ಲಿ ಭೂಸ್ವಾಧೀನತೆಗೆ ಸಂಬಂಧಿಸಿದ ಪುನರ್ವಸತಿ ಮತ್ತು ಪುನರ್ನಿರ್ಮಾಣ ಸಮಿತಿಯ ಸಭೆಯನ್ನು ನಡೆಸಲಾಯಿತು.

ಇದನ್ನೂ ಓದಿ :ಶಂಭೂರು ವ್ಯಾಯಾಮ ಶಾಲೆಯ ನೂತನ ಅಂಗನವಾಡಿ ಕೇಂದ್ರ ಕಟ್ಟಡಕ್ಕೆ ಶಿಲಾನ್ಯಾಸ

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್, ಡಾ ವೈ ಭಾರತ್ ಶೆಟ್ಟಿ ಮತ್ತು ಶ್ರೀ ವೇದವ್ಯಾಸ ಕಾಮತ್, ಜಿಲ್ಲಾಡಳಿತ, ಕೆಐಎಡಿಬಿ ಹಾಗೂ ಆರ್ ಅಂಡ್ ಆರ್ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.