ಮಂಗಳೂರು: ಪರಾರಿಯಾಗಲು ಯತ್ನಿಸಿದ್ದ ರೌಡಿಶೀಟರ್‌ನನ್ನು ಬೆನ್ನಟ್ಟಿ ಸಿನಿಮೀಯ ರೀತಿಯಲ್ಲಿ ಮೂಡಬಿದ್ರೆ ಪೊಲೀಸರು (Moodbidri Police) ಬಂಧಿಸಿದ್ದಾರೆ.

ಕಲ್ಲಡ್ಕ ನಿವಾಸಿ ತೌಸೀಪ್ ಯಾನೆ ಪಪ್ಪಿ ಬಂಧಿತ ಆರೋಪಿ.‌ ನಟೋರಿಯಸ್ ರೌಡಿ ತೌಸೀಪ್ ಮೂಡಬಿದ್ರೆ ಪರಿಸರದಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧನಕ್ಕೆ ಮುಂದಾಗಿದ್ದರು.

ಮೂಡಬಿದ್ರೆ ಹೊರವಲಯದ ಕೊಡಂಗಲ್ಲು ಸಮೀಪ ತೌಸೀಪ್ ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಆರೋಪಿಯ ಕಾರನ್ನು ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ಹಿಂಬಾಲಿಸಿದ್ದರು. ಪೊಲೀಸರು ಹಿಂಬಾಲಿಸುತ್ತಿರುವ ಬಗ್ಗೆ ಅರಿತ ತೌಸೀಪ್‌ ತನ್ನ ಕಾರನ್ನು ಅತಿ ವೇಗದಲ್ಲಿ ಹಿಮ್ಮುಖವಾಗಿ ಚಲಾಯಿಸಿ ಎಸ್ಕೇಪ್‌ ಆಗಲು ಯತ್ನಿಸಿದ್ದ.  ಇದನ್ನೂ ಓದಿ : ಸುರತ್ಕಲ್: ವೃದ್ಧೆಯ ಮನೆಗೆ ನುಗ್ಗಿ ಕಳ್ಳತನ , ಮೂವರ ಬಂಧನ

ಆತುರದಲ್ಲಿ ಚರಂಡಿಗೆ ಬಿದ್ದು ಕಾರು ಸಿಲುಕಿಕೊಂಡಿತು. ಅಲ್ಲಿಂದ ಪರಾರಿಯಾಗಲು ಯತ್ನಿಸಿದ ತೌಸೀಪ್‌ನನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿ ತಲವಾರ್ ಹಾಗೂ MDMA ವಶಪಡಿಸಿಕೊಂಡಿದ್ದಾರೆ.