ಮಂಗಳೂರು:  ಭಾರತದ ಏಕತೆಯ ಸೂತ್ರದಾರ ಸ್ವಾತಂತ್ರ್ಯ ಭಾರತದ ಮೊದಲ ಉಪ ಪ್ರಧಾನಿ ಭಾರತದ ಉಕ್ಕಿನ ಮನುಷ್ಯ ಗೃಹ ಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮ ಜಯಂತಿಯ ಪ್ರಯುಕ್ತ ರಾಷ್ಟ್ರವ್ಯಾಪಿ ಜರಗಿದ ಏಕತಾ ನಡಿಗೆ ಕಾರ್ಯಕ್ರಮದ ಪ್ರಯುಕ್ತ  ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಜಿಲ್ಲಾ ಮಟ್ಟದ ಏಕತಾ ನಡಿಗೆ ನ.10ರಂದು ಸೋಮವಾರ ಬೆಳಿಗ್ಗೆ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್. ವೃತ್ತದಿಂದ ಮಂಗಳೂರಿನ ಹೃದಯ ಭಾಗದಲ್ಲಿರುವ ಕುದ್ಮುಲ್ ರಂಗರಾವ್ ಪುರಭವನದ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ. ಏಕತಾ ನಡಿಗೆಗೆ ಚಾಲನೆಯನ್ನು ನೀಡಿದರು. ಇದನ್ನು ಓದಿ : ಮಂಗಳೂರು: ಭೂಸ್ವಾಧೀನತೆಗೆ ಸಂಬಂಧಿಸಿದ ಪುನರ್ವಸತಿ ಮತ್ತು ಪುನರ್ನಿರ್ಮಾಣ ಸಮಿತಿಯ ಸಭೆ

ಈ  ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ. ವೇದವ್ಯಾಸ ಕಾಮತ್. ವಿಧಾನ ಪರಿಷತ್ತಿನ ಸದಸ್ಯರು ಕಾರ್ಯಕ್ರಮದ ಸಂಚಾಲಕರಾದ ಕಿಶೋರ್ ಕುಮಾರ್ ಬೋಟ್ಯಾಡಿ ಜಿಲ್ಲಾಧಿಕಾರಿಗಳಾದ ದರ್ಶನ್ ಎಚ್. ಈ ಕಾರ್ಯಕ್ರಮದ ಕೇಂದ್ರ ಸರಕಾರದ ಯುವಜನ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳಾದ ಉಲ್ಲಾಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸತೀಶ್ ಕುಂಪಲ ಮಾಜಿ ಮಹಾ ಪೌರರಾದ ಪ್ರೇಮಾನಂದ ಶೆಟ್ಟಿ ನಿರ್ವಹಣಾ ಸಮಿತಿಯ ಪ್ರಮುಖರಾದ ದಿನೇಶ್ ಅಮ್ಟೂರು ಅರುಣ್ ಜೀ ಶೇಟ್ ನಂದನ್ ಮಲ್ಯ ಮತ್ತು ಎನ್ ಎಸ್ ಎಸ್. ಎನ್ ಸಿ ಸಿ. ಸ್ಕೌಟ್ಸ್ ಅಂಡ್ ಗೈಡ್ಸ್. ಸಂಸ್ಥೆ ಅಧಿಕಾರಿಗಳು ಮತ್ತು ಪ್ರಮುಖರುಗಳಾದ ಪೂಜಾ ಪೈ ರಮೇಶ್ ಕಂಡೆಟ್ಟು ಕಿರಣ್ ಕುಮಾರ್ ಕೋಡಿಕಲ್ ರಣದೀಪ್ ಕಾಂಚನ್ ಮತ್ತು ನಾಗರಿಕ ಬಂಧುಗಳು ಉಪಸ್ಥಿತರಿದ್ದರು