ಮಂಗಳೂರು: ಯೆನೆಪೋಯ (ಪರಿಗಣಿಸಲ್ಪಟ್ಟವಿಶ್ವವಿದ್ಯಾನಿಲಯ) ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಯೆನೆಪೋಯ ಸಂಶೋಧನಾ ಕೇಂದ್ರದ ಘಟಕವು ಜಾಗತಿಕ ತಾಪಮಾನ ಹೆಚ್ಚಳದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಿಶ್ವ ಪರಿಸರ ದಿನವನ್ನು ಜೂ.11 ಆಚರಿಸಿತು.

ಯೆನೆಪೋಯ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ರೇಖಾ ಪಿ.ಡಿ., ಎನ್‌ಎಸ್‌ಎಸ್ ಘಟಕದ ಸಂಯೋಜಕಿ ಹಾಗೂ ಎಕ್ಸ್ಟೆಂಶನ್ ಅಂಡ್ ಔಟ್-ರೀಚ್‌ ನಿರ್ದೇಶನಾಲಯದ ನಿರ್ದೇಶಕಿ ಡಾ. ಅಶ್ವಿನಿ ಎಸ್ ಶೆಟ್ಟಿ, ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಭಾಗ್ಯ ರ‍್ಮಾ ಮತ್ತು ಎನ್‌ಎಸ್‌ಎಸ್ (ವೈಆರ್‌ಸಿ) ಪ್ರೋಗ್ರಾಮ್ ಅಧಿಕಾರಿ ಡಾ. ಅಸೀಫ್ ಹಮೀದ್, ಮುಖ್ಯ ಅತಿಥಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಅರಣ್ಯ ಸಂರಕ್ಷಣಾಧಿಕಾರಿ ಶ್ರೀ. ಪಿ. ಶ್ರೀಧರ್ ಭಾಗವಹಿಸಿದರು.

ಈ ಕರ‍್ಯಕ್ರಮದ ಜೊತೆಯಲ್ಲಿ, “ಮರು ಭೂಮೀಕರಣ ಹಾಗೂ ಬರದಿಂದ ಭೂಮಿಯ ಮರುಸ್ಥಾಪನೆ” ಎಂಬ ವಿಷಯದೊಂದಿಗೆ ಯುವ ಮನಸ್ಸುಗಳಿಗೆ ಕಾಡು ಸಂರಕ್ಷಣೆಯ ಮಹತ್ವದ ಅರಿವು ಮೂಡಿಸಲು ಇ-ಪೋಸ್ಟರ್ ಸ್ಪರ್ಧೆಯನ್ನು
ಏರ್ಪಡಿಸಿದರು.

.ಜನರಿಗೆ ಮರಗಳನ್ನು ನೆಡುವಂತೆ ಪ್ರೋತ್ಸಾಹಿಸುವ ಸಲುವಾಗಿ ಸುಮಾರು 150 ಸಸಿಗಳು ಮತ್ತು ಸೀಡ್ಬಾಲ್ಗಳನ್ನು ವಿತರಿಸಿದರು. ಇದರಲ್ಲಿ ಶ್ರೀಗಂಧ, ನೆಲ್ಲಿಕಾಯಿ, ಹಲಸು, ಕಕ್ಕೆ, ಮಂತುಹುಳಿ, ಮತ್ತು ಜಾಮೂನು (ಸೀಡ್ಬಾಲ್) ಸೇರಿದಂತೆ ವಿವಿಧ ತಳಿಯ ಸಸಿಗಳು ಒಳಗೊಂಡಿದ್ದವು.

ಕಾರ್ಯಕ್ರಮವನ್ನು ಕು.ಮನ್ವಿತಾ ಕೆ. ಸ್ವಾಗತಿಸಿ, ವಂದಿಸಿದರು. ಡಾ. ರೇಖಾ ಪಿ.ಡಿ., ಡಾ. ಅಶ್ವಿನಿ ಎಸ್ ಶೆಟ್ಟಿ, ಡಾ. ಅಸಿಫ್ ಹಮೀದ್ ಮತ್ತು ಎನ್‌ಎಸ್‌ಎಸ್ ಆಯೋಜನಾ ಸಮಿತಿಯ ಸ್ವಯಂಸೇವಕರಾದ ಜೋಯಲ್, ರೋವಿನಾ, ಮನ್ವಿತಾ, ಅಮಿನಾ, ಶೇಷ, ಶ್ರೀಲಕ್ಷ್ಮಿ ಮತ್ತು ದೀಪಿಕಾ. ಸಂಯೋಜಿಸಿ, ನಿರ್ವಹಿಸಿದರು.