ಮಂಗಳೂರು: ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅಕ್ಕ ಕೂಡ ಅಪಘಾತಕ್ಕೆ ಬಲಿಯಾಗಿರುವ ಘಟನೆ ಮಂಗಳೂರಿನ ಪಾವಂಜೆ ಬಳಿ ನಡೆದಿದೆ. ಇದನ್ನೂ ಓದಿ : ಪ್ರಧಾನಿ ಮೋದಿಗೆ `ಧರ್ಮ ಚಕ್ರವರ್ತಿ’ ಬಿರುದು ಪ್ರದಾನ
ಹದಿನೈದು ದಿನಗಳ ಅಂತರದಲ್ಲೇ ಅಕ್ಕ – ತಮ್ಮ ಇಬ್ಬರೂ ಸಾವನ್ನಪ್ಪಿದ್ದಾರೆ. ನಗರದ ಬಂಗ್ರಕೂಳೂರು ನಿವಾಸಿಗಳಾದ ಶ್ರುತಿ ಹಾಗೂ ಸುಜಿತ್ ಮೃತಪಟ್ಟ ಅಕ್ಕ-ತಮ್ಮ.
ತಮ್ಮ ಸುಜಿತ್ ಇದೇ ಜೂನ್ 10ರಂದು ಮೃತಪಟ್ಟಿದ್ದ. ಹಾಗಾಗಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ಶೃತಿ ಚೆನ್ನೈನಿಂದ ಬಂದಿದ್ದಳು. ಬ್ಯಾಂಕ್ ಕೆಲಸದ ನಿಮಿತ್ತ ಪಾವಂಜೆ ಬಳಿ ಸ್ಕೂಟರ್ ನಿಲ್ಲಿಸಿ ರೈನ್ ಕೋಟ್ ಧರಿಸುತ್ತಿದ್ದರು, ತಮ್ಮ ತಂದೆ ಕೂಡ ಜೊತೆಗಿದ್ದರು. ಈ ವೇಳೆ ಹಿಂಬಂದಿಯಿಂದ ಬಂದು ಕಾರು ಗುದ್ದಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಶೃತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ತಂದೆ ಗೋಪಾಲ ಆಚಾರ್ಯ ಅವರೂ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ : ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶ
ಗೋಪಾಲ ಆಚಾರ್ಯರಿಗೆ ಇಬ್ಬರೇ ಮಕ್ಕಳಿದ್ದು, ಪುತ್ರನ ಸಾವು ಮಾಸುವ ಮುನ್ನವೇ ಪುತ್ರಿಯೂ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬದ ಶೋಕಸಾಗರದಲ್ಲಿ ಮುಳುಗಿದೆ.