ಯಕ್ಷ ಧ್ರುವ ಯಕ್ಷ ಶಿಕ್ಷಣ ಪಟ್ಲ ಫೌಂಡೇಶನ್ ವತಿಯಿಂದ ಫೆ.6 ರಂದು ಆಳ್ವಾಸ್ ವಿದ್ಯಾಗಿರಿಯಲ್ಲಿ ನಡೆದ ರಾಜ್ಯಮಟ್ಟದ ಯಕ್ಷ ರೂಪಕ ಸ್ಪರ್ಧೆಯಲ್ಲಿ ಬಂಟ್ವಾಳ ಮಂಚಿ – ಕೊಳ್ನಾಡು ಸರಕಾರಿ ಪ್ರೌಢ ಶಾಲೆಯು ದ್ವಿತೀಯ ಸ್ಥಾನ ಪಡೆದುಕೊಂಡಿದೆ.

“ಲಕ್ಷ್ಮೀ ಸ್ವಯಂವರ” – ಎನ್ನುವ ರೂಪಕವನ್ನು ಯಕ್ಷಗಾನ ಗುರುಗಳಾದ ಅಶ್ವತ್ ಮಂಜನಾಡಿ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಿದರು.

ದ್ವಿತೀಯ ಸ್ಥಾನವನ್ನು 20,000/= ನಗದು ಬಹುಮಾನ ದೊಂದಿಗೆ ಪುರಸ್ಕೃತರಾಗಿದ್ದಾರೆ. ಈ ಮೂಲಕ ಸರಕಾರಿ ಶಾಲೆ ಮಕ್ಕಳು ಸರಿಯಾದ ಮಾರ್ಗದರ್ಶನ ಸಿಕ್ಕರೆ ಖಾಸಗಿ ಶಾಲೆಗಳಿಗೆ ಪ್ರತಿ ಸ್ಪರ್ಧಿಗಳಾಗಬಲ್ಲರು ಎಂದು ತೋರಿಸಿಕೊಟ್ಟಿದ್ದಾರೆ.

ಅತ್ಯುತ್ತಮ ಪ್ರದರ್ಶನ ನೀಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಯಕ್ಷಗಾನ ಗುರುಗಳಿಗೆ ಶಾಲಾಭಿವೃದ್ಧಿ ಸಮಿತಿ ಅಭಿನಂದನೆ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಯಕ್ಷಗಾನ ಗುರುಗಳು ಅಶ್ವಥ್ ಮಂಜನಾಡಿ, ಶಾಲಾಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷರಾದ ಬಾಲಕೃಷ್ಣ ಸೇರ್ಕಳ ಮುಖ್ಯ  ಶಿಕ್ಷಕಿ ಸುಶೀಲ ವಿಟ್ಲ, ಡಾಕ್ಟರ್ ಗೋಪಾಲ್ ಆಚಾರ್, ರಾಮಪ್ರಸಾದ್ ರೈ ತಿರುವಜೆ, ರಮೇಶ್ ಟೈಲರ್, ಶಿಕ್ಷಕ ತಾರಾನಾಥ್ ಕೈರಂಗಳ, ಅನುಸೂಯ ಟೀಚರ್, ಪಟ್ಲ ಫೌಂಡೇಶನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರೂಪಕದಲ್ಲಿ ಭಾಗವಹಿಸಿ ಪ್ರಶಸ್ತಿ ಪುರಸ್ಕೃತರಾದ ಶಾಲಾ 10ನೇ ತರಗತಿ ವಿದ್ಯಾರ್ಥಿಗಳಾದ ಅಪೂರ್ವ, ವರ್ಷಿಣಿ , ಧರಿತ್ರಿ .ಕೃತಿಕಾ ಶೆಟ್ಟಿ ಕಾವ್ಯ, ಸ್ಫೂರ್ತಿ

9ನೇ ತರಗತಿ ವವಿದ್ಯಾರ್ಥಿಗಳಾದ ಆಶಿಕಾ, ಪ್ರೀತಿಕಾ, ದೀಕ್ಷಾ ಮಂಚಿ ದೀಕ್ಷಾ ಸಾಲೆತ್ತೂರು, ಚೈತ್ರಾ, ಮೈತ್ರಿ, ತನು, ಸುಕನ್ಯ, ಕೃತಿಕಾ, ಮೋಕ್ಷಿತಾ, ದಿವ್ಯಾಶ್ರೀ, ಸಿಂಗಾರಕೋಡಿ , ಶ್ರೇಣಿಕಾ , ಚೈತನ್ಯ , ಸಿಂಚನಾ, ದಿವ್ಯಾಶ್ರೀ ನಾಯಕ್, ಮಂಜುಳಾ, ಧನುಷ, ಜ್ಯೋತಿಕಾ, ನವನೀತ್, ಕಾರ್ತಿಕ್, ವೈಭವ್, ಪ್ರಜ್ವಲ್ , ಚರಣ್, ಪ್ರಣೀತ್, ಧನ್ವಿತ್

8ನೇ ತರಗತಿ ವಿದ್ಯಾರ್ಥಿಗಳಾದ ತ್ರಿಶಾ, ದೀಪ್ತಿ , ಮಾನ್ವಿ, ನಿಧಿ ಕೈರಂಗಳ, ವಿಧಾತ್ರಿ