ಬಂಟ್ವಾಳ ಬೈಪಾಸ್ ರಸ್ತೆ ನಿತ್ಯಾನಂದ ನಗರದ ಶ್ರೀ ಸದ್ಗುರು ನಿತ್ಯಾನಂದ, ಗೋವಿಂದ ಸ್ವಾಮಿ ಮಂದಿರದಲ್ಲಿ ಮಾ. 8 ಶುಕ್ರವಾರದಂದು ಮಹಾಶಿವರಾತ್ರಿ ಆಚರಣೆಯ ಪ್ರಯುಕ್ತ ಮಂದಿರದಲ್ಲಿ ಬೆಳಿಗ್ಗೆ ಗಂಟೆ 7.30ಕ್ಕೆ ಗುರುದೇವರಿಗೆ ನಿತ್ಯ ಪೂಜೆ, ಬೆಳಿಗ್ಗೆ ಗಂಟೆ 8.00ರಿಂದ ಸಂಜೆ ಗಂಟೆ 7.00ರ ತನಕ ಎಲ್ಲಾ ಭಕ್ತರಿಗೆ ಗರ್ಭಗೃಹ ಪ್ರವೇಶಿಸಿ ಗುರುದ್ವಯರ ದರ್ಶನ ಪಡೆಯುವ ಅವಕಾಶ ಹಾಗೂ ಸ್ವತಃ ತಮ್ಮ ಹಸ್ತಗಳಿಂದಲೇ ಗುರುದ್ವಯರಿಗೆ ಆರತಿ ಮಾಡುವ ಅವಕಾಶ ಇರುತ್ತದೆ.

ಸಂಜೆ ಗಂಟೆ 6.00 ರಿಂದ ರಾತ್ರಿ ಗಂಟೆ 8.45ರ ವರೆಗೆ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 9.00ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ರಾತ್ರಿ ಗಂಟೆ 10.00 ಕ್ಕೆ ಸರಿಯಾಗಿ ಮಂದಿರದಿಂದ ನಾಮಸಂಕೀರ್ತನದ ಮೂಲಕ ಬಡ್ಡಕಟ್ಟೆ ಶ್ರೀ ನಿತ್ಯಾನಂದ ಸ್ವಾಮಿ ಭಜನಾ ಮಂದಿರಕ್ಕೆ ನಗರ ಭಜನೆ ಹೊರಡಲಿದ್ದು, ನಂತರ ಬಡ್ಡಕಟ್ಟೆ ಮಂದಿರದಲ್ಲಿ ಭಜನಾ ಕಾರ್ಯಕ್ರಮ ನಡೆಯಲಿರುವುದು ಎಂದು ಪ್ರಕಟನೆ ತಿಳಿಸಿದೆ.

ವಿ. ಸೂಚನೆ.:-
ಬಿಲ್ವಪತ್ರ ಮಾಲೆ, ಎಕ್ಕ ಹೂವಿನ ಮಾಲೆ, ಇತರ ಹೂ, ಪೂಜಾ ವಸ್ತುಗಳನ್ನು ಮಂದಿರದಲ್ಲಿ ಸ್ವೀಕರಿಸಲಾಗುವುದು.