MG ಮೋಟಾರ್ ಇಂಡಿಯಾ (MG Motor India) ತನ್ನ ಹೊಸ ವಿಂಡ್ಸರ್ EV ಕಾರನ್ನು ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿತ್ತು. ಈ ಸಂದರ್ಭದಲ್ಲಿ ಪರಿಚಯಾತ್ಮಕ ಬೆಲೆಯನ್ನು ಮಾತ್ರ ಬಹಿರಂಗಪಡಿಸಿತ್ತು. ಇದೀಗ ತನ್ನ ವೇರಿಯಂಟ್ಗಳ ಬೆಲೆಗಳನ್ನು ಘೋಷಿಸಿದೆ. MG ವಿಂಡ್ಸರ್ (MG Windsor) EV ಬೆಲೆ 13.50 ಲಕ್ಷ ರೂ (ಎಕ್ಸ್ ಶೋರೂಂ) ದಿಂದ ಆರಂಭಗೊಳ್ಳುತ್ತದೆ.
ಎಂಜಿ ವಿಂಡ್ಸರ್ ಇವಿ ಎಕ್ಸೈಟ್, ಎಕ್ಸ್‌ಕ್ಲೂಸಿವ್ ಮತ್ತು ಎಸೆನ್ಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಇವುಗಳ ಬೆಲೆ ಕ್ರಮವಾಗಿ 13.50 ಲಕ್ಷ, 14.50 ಲಕ್ಷ ಮತ್ತು 15.50 ಲಕ್ಷ ರೂ (ಎಕ್ಸ್ ಶೋರೂಂ). ಸ್ಟಾರ್‌ಬರ್ಸ್ಟ್ ಬ್ಲ್ಯಾಕ್, ಪರ್ಲ್ ವೈಟ್, ಕ್ಲೇ ಬೀಜ್ ಮತ್ತು ಟರ್ಕೋಯಿಸ್ ಗ್ರೀನ್ ಬಣ್ಣಗಳಲ್ಲಿ ಈ ಕಾರು ಲಭ್ಯವಿದ್ದು, ಬುಕ್ಕಿಂಗ್ ಅಕ್ಟೋಬರ್ 3ರಿಂದ ಪ್ರಾರಂಭವಾಗಲಿದ್ದು, ಕಾರಿನ ವಿತರಣೆಯು ಅಕ್ಟೋಬರ್ 12 ರಿಂದ ಪ್ರಾರಂಭವಾಗಲಿದೆ.
15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ವಿಥ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, 9-ಸ್ಪೀಕರ್ ಇನ್ಫಿನಿಟಿ ಆಡಿಯೊ ಸಿಸ್ಟಮ್, 256-ಬಣ್ಣದ ಆಂಬಿಯೆಂಟ್ ಲೈಟಿಂಗ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್. 8.8-ಇಂಚಿನ ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕೀಲೆಸ್ ಎಂಟ್ರಿ ಮತ್ತು ಪುಶ್-ಬಟನ್ ಸ್ಟಾರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ವಿಂಡ್ಸರ್ EV ಒಳಗೊಂಡಿದೆ.