ಬಂಟ್ವಾಳ : ಮಕ್ಕಳ ಕಲಾಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಇದರ ವತಿಯಿಂದ ಬಂಟ್ವಾಳ ತಾಲೂಕಿನ ಕೊಡಂಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹಯೋಗದಲ್ಲಿ ಬಂಟ್ವಾಳ ಮೂಡ ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಅನುದಾನಿತ ಮತ್ತು ಅನುದಾನಿತ ಹಿರಿಯ ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಸಾಹಿತ್ಯ ಸ್ವರಚನೆ ಪ್ರೇರಣಾ ಕಮ್ಮಟ ಜರಗಿತು.
ಕಮ್ಮಟವನ್ನು ಉದ್ಘಾಟಿಸಿದ ಬಂಟ್ವಾಳ ಮೂಡ ಸಿ.ಆರ್.ಪಿ. ಪ್ರೇಮಲತಾ ಸಾಹಿತ್ಯವು ಜೀವನದ ಸ್ವರೂಪವನ್ನು ಉತ್ತಮ ದಿಕ್ಕಿಗೆ ಪ್ರವಹಿಸುವಂತೆ ಮಾಡುತ್ತದೆ. ಸಮಯದ ಸದುಪಯೋಗ ಮತ್ತು ಮನೋಶಕ್ತಿ ಬಲಗೊಳ್ಳಲು ಸಾಹಿತ್ಯದಿಂದ ಮಾತ್ರ ಸಾಧ್ಯ. ಮಕ್ಕಳಿಂದ ಉತ್ತಮ ಸಾಹಿತ್ಯಗಳು ಮೂಡಿ ಬರಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುಕೊಡಂಗೆ ಶಾಲಾ ಎಸ್. ಡಿ.ಎಂ.ಸಿ.ಯ ನಿಕಟ ಪೂರ್ವ ಅಧ್ಯಕ್ಷರಾದ ಇಸ್ಮಾಯಿಲ್ ಬಿ. ಎಂ ವಹಿಸಿದ್ದರು.
ಮಕ್ಕಳ ಸ್ವರಚಿತ ಸಾಹಿತ್ಯದ ಹಸ್ತಪತ್ರಿಕೆಯನ್ನು ಕೊಡಂಗೆ ಶಾಲಾ ಮುಖ್ಯ ಶಿಕ್ಷಕಿ ಸುಗುಣ ಬಿಡುಗಡೆ ಮಾಡಿದರು.
ಹಿರಿಯ ವಿದ್ಯಾರ್ಥಿ ಸಂಘದ ಹುಸೈನ್ ಮತ್ತು ಮೊಹಮ್ಮದ್ ಹನೀಫ್ ಉಪಸ್ಥಿತರಿದ್ದರು.
ಮಕ್ಕಳ ಕಲಾಲೋಕದ ಅಧ್ಯಕ್ಷರಾದ ರಮೇಶ ಎಂ. ಬಾಯಾರು ಪ್ರಸ್ತಾವನೆ ಮಾಡಿದರು. ಮುಖ್ಯ ಶಿಕ್ಷಕಿ ಸುಗುಣ ಸ್ವಾಗತಿಸಿ, ವಿಲ್ಮಾ ಸಿಕ್ವೇರ ವಂದಿಸಿ,ಮಕ್ಕಳ ಕಲಾಲೋಕದ ಕಾರ್ಯದರ್ಶಿ ಪುಷ್ಪಾ ಎಚ್ ಕಾರ್ಯಕ್ರಮ ನಿರೂಪಿಸಿದರು.