ಶಿಕಾರಿಪುರ ತಾಲ್ಲೂಕಿನ ಶ್ರೀ ಧರ್ಮಕ್ಷೇತ್ರ ದಿಂಡದಹಳ್ಳಿ ಹಿರೇಮಠದಲ್ಲಿ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪದರ ದಿವ್ಯ ಸಾನಿಧ್ಯದಲ್ಲಿ ನಡೆಯುತ್ತಿರುವ ತಪೋರತ್ನ ಲಿಂಗೈಕ್ಯ ಶ್ರೀ ಶಿವಾನಂದ ಶಿವಾಚಾರ್ಯ ಶ್ರೀಗಳ 22 ನೇ ವರ್ಷದ ಲಿಂಗಾಂಗ ಸಾಮರಸ್ಯ ಕಾರ್ಯಕ್ರಮ ಹಾಗೂ ಲಿಂಗೈಕ್ಯ ಗುರುಗಳ ನೂತನ ಶಿಲಾಮಂದಿರ ಲೋಕಾರ್ಪಣೆ ಹಾಗೂ ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗವಹಿಸಿದರು.

ಈ ಸಂದರ್ಭದಲ್ಲಿ ಜನಪ್ರಿಯ ಸಂಸದರಾದ ಶ್ರೀ @BYRBJP, ವಿವಿಧ ಮಠಗಳ ಹರಗುರು ಚರಮೂರ್ತಿಗಳು, ಸಮಾಜದ ಮುಖಂಡರು ಹಾಗೂ ಶ್ರೀಮಠದ ಭಕ್ತಾದಿಗಳು ಭಾಗವಹಿಸಿದ್ದರು.