ಬಂಟ್ವಾಳ: ನರಿಕೊಂಬು ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಅ . 3 ರಂದು ಮುಂಜಾನೆ ಶರನ್ನವರಾತ್ರಿ ಉತ್ಸವಕ್ಕೆ ದೀಪ ಬೆಳಗಿಸಿ, ಗದ್ದುಗೆ ಏರಿಸಿ ಚಾಲನೆ ನೀಡಲಾಯಿತು.
ತಂತ್ರಿಗಳಾದ ಕೇಶವ ಶಾಂತಿ, ಆಡಳಿತ ಮಂಡಳಿ ಅಧ್ಯಕ್ಷ ರಾಜ್ ಬಂಟ್ವಾಳ್, ವ್ಯವಸ್ಥಾಪಕ ಸಂಜೀವ ಸಪಲ್ಯ, ಕಾರ್ಯದರ್ಶಿ ಮನೋಜ್ ಕೇದಿಗೆ, ಕೋಶಾಧಿಕಾರಿ ಕಿಶೋರ್ ಕಲ್ಯಾಣಾಗ್ರಹಾರ, ಸಹಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಅಂತರ ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.