ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬಂಟ್ವಾಳ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಶಾಲಾಭಿವೃದ್ಧಿ ಸಮಿತಿ ಕುಜ್ಲುಬೆಟ್ಟು ಇದರ ಸಹಯೋಗದೊಂದಿಗೆ ಸೋಮವಾರ ಬಂಟ್ವಾಳ ತಾಲೂಕಿನ ಮೂಢನಡುಗೋಡು ಗ್ರಾಮದ ಕುಜ್ಲುಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರದಲ್ಲಿ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮ ನಡೆಯಿತು.

ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.

ಮೂಢನಡುಗೋಡು ಗ್ರಾಮದ ಕುಜ್ಲುಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರದಲ್ಲಿ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಿದಾನಂದ ಕುಜ್ಲುಬೆಟ್ಟು ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ಪಂಜಿಕಲ್ಲು ಪಂಚಾಯತ್ ಸದಸ್ಯರಾದ ಸಂಜೀವ ಪೂಜಾರಿ ಪಿಲಿಂಗಾಲ್, ರಾಜೇಶ್ ಯೋಜನಾ ಮೇಲ್ವಿಚಾರಕರು ಬಂಟ್ವಾಳ,ಮೂಡನಡುಗೋಡು ಸೇವಾನಿರತೆ ಪ್ರಫುಲ್ಲಾ ದಡ್ಡಲಕಾಡು, ಜನಜಾಗೃತಿ ಸದಸ್ಯರಾದ ಸದಾನಂದ ಗೌಡ ಹಳೇಗೇಟು, ನಿವೃತ್ತ ಶಿಕ್ಷಕರಾದ ರಾಮಕೃಷ್ಣ ಪ್ರಭು, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಡೀಕಮ್ಮ ಕುಲಾಲ್,ಯೋಜನಾ ಪ್ರಮುಖರಾದ ಭಾಸ್ಕರ್ ಕುಲಾಲ್ ಕರೆಂಕಿ ಉಪಸ್ಥಿತರಿದ್ದು,ಧ.ಯೋಜನೆ ತಾಲೂಕು ಕೃಷಿ ಅಧಿಕಾರಿ ಭಾಸ್ಕರ್ ಇವರು ಕಾರ್ಯಕ್ರಮದ ಮಾಹಿತಿ ಇತ್ತರು.

ಶಾಲಾ ಮಕ್ಕಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕ ಬಿ.ಕುಮಾರ್ ಸ್ವಾಗತಿಸಿ,ಶಿಕ್ಷಕಿ ತುಳಸಿನಿ ವಂದಿಸಿದರು.