ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ನೂತನವಾಗಿ 13.90 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ವಿವೇಕ ತರಗತಿ ಕೊಠಡಿ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಡಿ.28 ರಂದು ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಕೆ. ಅಣ್ಣು ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಆಶಯದಂತೆ ಶಾಲಾ ಕಾರ್ಯಕ್ರಮಗಳು ಮಕ್ಕಳಿಗೋಸ್ಕರ ನಡೆಯುವ ಕಾರ್ಯಕ್ರಮ, ಸಮಯಕ್ಕೆ ಸರಿಯಾಗಿ ಎಲ್ಲಾ ಕಾರ್ಯಕ್ರಮಗಳು ಮಕ್ಕಳ ಮುಖಾಂತರ ನಡೆಯಬೇಕು ಎನ್ನುವಂತೆ ಶಾಲಾ ಮಕ್ಕಳು ಗಣ್ಯರ ಉಪಸ್ಥಿತಿಯಲ್ಲಿ ತರಗತಿ ಕೊಠಡಿಗಳನ್ನು ಉದ್ಘಾಟಿಸಿದರು.
ಕಲ್ಲಡ್ಕ ಲಕ್ಷ್ಮಿ ಗಣೇಶ್ ಕೇಟಿ ಹೋಟೆಲ್ ಮಾಲಕ ರಾಜೇಂದ್ರ ಏನ್. ಹೊಳ್ಳ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಚರಕ ಮಹರ್ಷಿ ಶಾಲಾ ಆಯುರ್ವೇದಿಕ ವನವನ್ನು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಉದ್ಘಾಟಿಸಿದರು. ಬಳಿಕ ಮಾತನಾಡಿ ಪ್ರೀತಿಯ ಮಮತೆಯನ್ನು ಅರಗಿಸಿದ ಶಿಕ್ಷಕನಿಂದ ಮಾತ್ರ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ, ಅಂತ ಶಿಕ್ಷಣ ಸರಕಾರಿ ಶಾಲೆಗಳಿಂದ ಮಾತ್ರ ನೀಡಲು ಸಾಧ್ಯ, ವೈಜ್ಞಾನಿಕ ಲೋಕಕ್ಕೆ ಕಾಲಿಡುವ ಸಂದರ್ಭದಲ್ಲಿ ಮುಕ್ತ ಮನಸ್ಸುಗಳನ್ನು ಅರಳಿಸಲು ಉತ್ತಮ ವಾತಾವರಣ ಅಗತ್ಯ ಅದಕ್ಕೆ ಕುದ್ರೆಬೆಟ್ಟು ಶಾಲೆ ಮಾದರಿ ಆಗಿದೆ ಎಂದರು.
ಶಾಲಾ ಸ್ಮಾರ್ಟ್ ತರಗತಿಯನ್ನು ಮಾಜಿ ಶಾಸಕ ರುಕ್ಮಯ ಪೂಜಾರಿ ಉದ್ಘಾಟಿಸಿದರು, ಬಳಿಕ ಮಾತನಾಡಿ ಶಾಲಾಭಿಮಾನಿಗಳ ಸಹಕಾರದಿಂದ ಇಂದು ಅನೇಕ ಸರಕಾರಿ ಶಾಲೆಗಳು ಖಾಸಾಗಿ ಶಾಲೆಗಳನ್ನು ಮೀರಿ ಬೆಳೆದಿದೆ. ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸರಕಾರಿ ಶಾಲೆಗೆ ಕಳಿಸುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಾಲ್ತಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಂಜಿನಿ, ಪಂಚಾಯತ್ ಸದಸ್ಯರುಗಳಾದ ಲತೇಶ್, ಮಮತಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ, ಮಣಿಕಂಠ ಯುವಶಕ್ತಿ ಸಂಘದ ಅಧ್ಯಕ್ಷ ಲೋಕನಾಥ ಏಳ್ತೀಮಾರ್, ಐ.ಎ.ಎಸ್. ಅಧಿಕಾರಿ ಮುಕುಲ್ ಜೈನ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಧ್ಯಾ, ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ, ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಸತೀಶ್ ರಾವ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚೆನ್ನಪ್ಪ ಕೋಟ್ಯಾನ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ದಿನೇಶ್ ಅಮ್ಟೂರ್, ಗ್ರಾಮ ಪಂಚಾಯತ್ ಸದಸ್ಯರುಗಳಾದ , ಕುಮಾರಿ ಹಿರಣ್ಮಯಿ, ಮಲ್ಲಿಕಾ ಎನ್.ಎಂ., ಶೋಭಾ ಎನ್, ಹರಿಣಾಕ್ಷಿ, ಗ್ರಾಮ ಆಡಳಿತ ಅಧಿಕಾರಿ ಯಶ್ವಿತಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಾಜ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಶಾಲೆಗೆ ಸಹಕಾರ ನೀಡಿದ ದಾನಿಗಳಿಗೆ ಕಲ್ಲಡ್ಕ ಲಕ್ಷ್ಮಿ ಗಣೇಶ್ ಕೇಟಿ ಹೋಟೆಲ್ ಮಾಲಕ ರಾಜೇಂದ್ರ ಏನ್ ಹೊಳ್ಳ, ಶಾಲಾ ಪೋಷಕರಾದ ಶುಕುರ್ ಸಾಹೇಬ್, ಸಾಲಿಯನ್ ಅರ್ಥ ಮೂವಸ್ಸ್‌ನ ಯೋಗೀಶ್ ಸಾಲಿಯನ್, ಪಾಣೆಮಂಗಳೂರು ಚಂದ್ರಿಕಾ ವೆಜಿಟೇಬಲ್ ನ ಮೊಹಮ್ಮದ್ ನಜೀರ್, ಶೀನ ನಾಯ್ಕ್, ಶಿಲ್ಪ, ಕಟ್ಟಡ ಕಾಂಟ್ರಾಕ್ಟರ್ ಮಾಧವ, ಅಬ್ದುಲ್ ರಜಾಕ್, ಪಿ. ಕೆ. ನವಾಜ್ ಅಭಿನಂದಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಪುಟಾಣಿಗಳಿಂದ, ಶಾಲಾ ಮಕ್ಕಳಿಂದ, ಸ್ತ್ರೀ ಶಕ್ತಿ ಸಂಘದ ಸದಸ್ಯರಿಂದ, ಮಕ್ಕಳ ಪೋಷಕರಿಂದ ಮತ್ತು ಸ್ಥಳೀಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.
ಶಾಲಾ ವಿದ್ಯಾರ್ಥಿನಿ ಪ್ರೇರಣ ಪ್ರಾರ್ಥನಾ ಗೀತೆ ಹಾಡಿದರು. ಮುಖ್ಯ ಶಿಕ್ಷಕಿ ದೇವಿಕಾ ಬಿ. ಸ್ವಾಗತಿಸಿ, ಶಿಕ್ಷಕಿ ಮಮತಾ ಸಮ್ಮಾನಿತರ ವರದಿ ವಾಚಿಸಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಠಲ ವಂದಿಸಿ, ಸಂತೋಷ್ ಬೋಳ್ಪೋಡಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿಶಾಲಾಕ್ಷಿ, ಅತಿಥಿ ಶಿಕ್ಷಕಿ ಸುಮಿತ್ರ, ಗೌರವ ಶಿಕ್ಷಕರಾದ ಅಮಿತಾ ದಾಸಕೋಡಿ, ಅಮಿತಾ ಕುದ್ರೆಬೆಟ್ಟು ಸಹಕರಿಸಿದರು.