ಬಂಟ್ವಾಳ: ತೌಲವ ಸಂಸ್ಕೃತಿಯಲ್ಲಿ ‘ಆಟಿ’ ತಿಂಗಳು ವಿಶೇಷತೆಗಳಿಂದ ಕೂಡಿದ ಮಾಸವಾಗಿದೆ. ಪ್ರಕೃತಿಯಲ್ಲಿ ಬದುಕುವ ಮಾನವ ಪ್ರಕೃತಿಯೆಡೆಗೆ ಸಾಗುವ ದಿನಗಳಾಗಿದೆ. ನಮ್ಮ ಪರಿಸರದಲ್ಲಿ ಬೆಳೆದ ಫಲವಸ್ತು ತರಕಾರಿಗಳು ಅವನ ಆಹಾರವಾಗಿವೆ. ಅವು ಅವನ ಆರೋಗ್ಯಕ್ಕೆ  ಪೂರಕವಾಗಿವೆಎಂದು ವಿದ್ಯಾಗಿರಿಯ ಶ್ರೀ ವೆಂಕಟರಮಣ ಸ್ವಾಮೀ ಇಂಗ್ಲೀಷ್ ಮೀಡಿಯಂ ಶಾಲೆಯ ಶಿಕ್ಷಕ ಶ್ರೀ ಪರಮೇಶ್ವರ ಜಿ ಹೆಗ್ಡೆ ಹೇಳಿದರು. ಇದನ್ನೂ ಓದಿ : ಸೇವಾಂಜಲಿ ಸೇವಾ ಕಾರ್ಯದ ಮೂಲಕ ಜನರಿಗೆ ಸ್ಪಂದನೆಯನ್ನು ನೀಡುತ್ತಿದೆ – ದಿನೇಶ್ ಡಿ.
ಅವರು  ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಸಮೂಹ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ ‘ಕೆರ‍್ಡೊಂಜಿ ದಿನ’ ಎಂಬ ವಿಶೇಷ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ, ತೆಂಗಿನ ಹೂ ಅರಳಿಸುವ ಮೂಲಕ  ಚಾಲನೆ ನೀಡಿ ಮಾತನಾಡಿದರು. ಆಧುನಿಕಕಾಲದ ವಿದ್ಯಾರ್ಥಿಗಳು ಈ ಸಂಸ್ಕೃತಿಯನ್ನುಅರಿಯುವಲ್ಲಿ ಇಂತಹ ಆಚರಣೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು. ಇದನ್ನೂ ಓದಿ :  ಸಿದ್ಧಕಟ್ಟೆ ಬಿಲ್ಲವ ಸಂಘದ ನೂತನ ಅಧ್ಯಕ್ಷರಾಗಿ ಉದ್ಯಮಿ ಸಮಾಜ ಸೇವಕ ಕಿರಣ್ ಮಂಜಿಲ ಆಯ್ಕೆ
ಶ್ರೀ ವೆಂಕಟರಮಣ ಸ್ವಾಮಿಇಂಗ್ಲೀಷ್ ಮೀಡಿಯಂ ಶಾಲೆ ವಿದ್ಯಾಗಿರಿ ಬಂಟ್ವಾಳ,ಇಲ್ಲಿನ ಮುಖ್ಯ ಶಿಕ್ಷಕರಾದ ಶ್ರೀ ಹರಿಪ್ರಸಾದರವರು ಮಾತನಾಡಿಆಟಿ ತಿಂಗಳ ವಿವಿಧ ಆಚರಣೆಗಳು,ಆಹಾರ ಪದ್ದತಿಗಳನ್ನು ವಿದ್ಯಾವಂತರೆನಿಸಿದವರು ತಿಳಿದು ಅಳವಡಿಸಿಕೊಂಡು ಅದನ್ನು ಮುಂದುವರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ವೆಂಕಟರಮಣ ಸ್ವಾಮೀ ಪದವಿ ಕಾಲೇಜಿನ ಪ್ರಾಂಶುಪಾಲ ಶ್ರೀ ಎಂ.ಡಿ ಮಂಚಿ ಮಾತನಾಡಿ ಆಟಿ ತಿಂಗಳ ಇಂತಹ ಆಚರಣೆಗಳ ಮಹತ್ವವನ್ನು  ಪ್ರತಿಯೊಬ್ಬ ವಿದ್ಯಾರ್ಥಿಗಳು ತಿಳಿಯುವಲ್ಲಿ ‘ಕೆರ‍್ಡೊಂಜಿ ದಿನ’ ಕಾರ್ಯಕ್ರಮ ಪ್ರಮುಖ ಪಾತ್ರವಹಿಸುತ್ತವೆ. ಕೆಸರಿನೊಂದಿಗಿನ ಆಟವು ಆತನ ಉತ್ತಮ ಆರೋಗ್ಯಕ್ಕೆಸಹಕಾರಿ. ತುಳುನಾಡಿನಲ್ಲಿರುವ ಸಂದಿ ಪಾಡ್ದನಗಳು ಈ ನೆಲದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದರು.
ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಶ್ರೀ ಸುದರ್ಶನ್ ಬಿ, ಕಾರ್ಯಕ್ರಮದ ಸಂಯೋಜಕರು, ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಅಖಿಲಾ ಪೈ ಹೆಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೈಲೆಶ್ ಶೆಟ್ಟಿ ಸ್ವಾಗತಿಸಿ , ವೀಕ್ಷಿತಾಗಟ್ಟಿ ವಂದಿಸಿದರು. ರಕ್ಷಿತ್‌ಆರ್ ಶೆಟ್ಟಿಕಾರ್ಯಕ್ರಮ ನಿರೂಪಿಸಿದದರು. ತದನಂತರ ಇಡೀ ದಿನ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಯಿತು. ಆಟಿ ತಿಂಗಳ ವಿಶಿಷ್ಟ ಖಾದ್ಯಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.