ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ ಇದರ ವತಿಯಿಂದ ಕೆಲಿಂಜ ಶ್ರೀ ನಿಕೇತನ ಮಂದಿರದಲ್ಲಿ ಅಯೋಧ್ಯ ಯಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಶ್ರೀ ರಾಮ ಪೂಜಾ ಕಾರ್ಯಕ್ರಮ ಪುರೋಹಿತರದ ಉದಯ ಭಟ್ ನಂದಾವರ ರವರ ನೇತ್ರತತ್ವತಲ್ಲಿ ನಡೆಯಿತು.

ಬೆಳಿಗ್ಗೆ ಪ್ರಗತಿಪರ ಕೃಷಿಕ ಸತ್ಯಸುಂಧರ ಭಟ್ ಕಲ್ಮಲೆ ದೀಪ ಪ್ರಜ್ವಲನೆ ಮಾಡುವ ಮುಲಕ ಕಾರ್ಯಕ್ರಮಕೆ ಚಾಲನೆ ನೀಡಿದರು. ನಂತರ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೇ ನಡೆಯಿತು. ಬಳಿಕ ಶ್ರೀ ರಾಮ ತಾರಕ ಮಂತ್ರ ಪಠಣೆ ಮಾಡಲಾಯಿತು.

ನಂತರ ಕೆಲಿಂಜ ದೇವಸ್ಥಾನದ ಆಡಳಿತ ಮುಖ್ಯಸ್ಥರರಾದ ಶಂಕರ್ ನಾರಾಯಣ ಭಟ್ ಪುಂಡಿಕೈ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಪ್ರಗತಿಪರ ಕೃಷಿಕರಾದ ಜಯಶ್ಯಾಮ್ ನೀರ್ಕಜೆ ಅವರು ಧಾರ್ಮಿಕ ಉಪನ್ಯಾಸ ಮಾಡಿದರು.

ಈ ಸಂದರ್ಭದಲ್ಲಿ ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ ವೀರಕಂಬ ವ್ಯಾಪ್ತಿಯ ಮಹನೀಯರನ್ನು ಅಭಿನಂದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಿವೃತ ಸೈನಿಕ ಶಿಕ್ಷಕ ಗೋಪಾಲಕೃಷ್ಣ ನಾಯಕ್ ಪುನಚ, ಮಂತ್ರಾಕ್ಷತೆ ವಿತರಣಾ ವೀರಕಂಬ ಮಂಡಲ ಪ್ರಮುಖ ಚಂದ್ರಶೇಖರ ಬಂಗೇರ ಬಾಯಿಲ, ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ ಇದರ ಅಧ್ಯಕ್ಷ ಚೇತನ್ ಶೆಟ್ಟಿ ಪೆಲತಡ್ಕ ಮೊದಲಾದವರು ಉಪಸ್ಥಿತರಿದ್ದರು.

ಚೇತನಾ, ತನ್ವಿ, ಮೇಘಶ್ರೀ ಪ್ರಾರ್ಥಿಸಿ, ಶ್ರೀಧರ ನಡುವಳಚ್ಚಿಲು ಸ್ವಾಗತಿಸಿ, ಪದ್ಮನಾಭ ಗೌಡ ಅದ್ಯಾಯಿ ಪ್ರಸ್ತವಿಕ ಮಾಡಿ, ಜಯಪ್ರಸಾದ್ ಕಲ್ಮಲೆ ವಂದಿಸಿ, ತೀರ್ಥೇಶ್ ಕೆಲಿಂಜ ಕಾರ್ಯಕ್ರಮ ನಿರೂಪಿಸಿದರು.

ಅಯೋಧ್ಯ ಯಲ್ಲಿ ನಡೆಯುವ ಕಾರ್ಯಕ್ರಮದ ನೇರ ವೀಕ್ಷಣೆ ವ್ಯವಸ್ಥೆ, ಹಾಗೂ ಅನ್ನದಾನ ಮಾಡಲಾಗಿತ್ತು.