ವೀರಕಂಭ ಗ್ರಾಮದ ಕೆಲಿಂಜಾ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಬಿ ತಿಮ್ಮಪ್ಪ ನಾಯ್ಕಅವರಿಗೆ 2024-25 ನೇ ಸಾಲಿನ ಹಿರಿಯ ಪ್ರಾಥಮಿಕ ವಿಭಾಗದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದುಕೊಂಡರು.

ಮುಚ್ಚುವ ಹಂತಕ್ಕೆ ತಲುಪಿದ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಹಕಾರ ಪಡೆದು 22 ರಿಂದ 95 ಮಕ್ಕಳ ಸಂಖ್ಯೆ ಹೆಚ್ಚಳ ,ದಾನಿಗಳ ನೆರವಿನಿಂದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆ ಮಾಡಿರುವುದು, ಮಾತ್ರವಲ್ಲದೆ 24 ಸಲ ರಕ್ತದಾನ ಮಾಡಿ ಅದೆಷ್ಟೋ ಮಂದಿಗೆ ಜೀವ ತುಂಬಿರುವುದು, ರಾಜ್ಯ ಮಟ್ಟದ ಕ್ರೀಡಾಪಟು, ಸಮಾಜ ಸೇವಕ,ಕೃಷಿಕ ಮತ್ತು ಮಕ್ಕಳಿಗೆ ವಿಶೇಷ ಶೈಕ್ಷಣಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುವ ಮೂಲಕ ಜನಮನ ಗೆದ್ದ ಶಿಕ್ಷಕನನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿರುತ್ತಾರೆ.