ಉಡುಪಿಯ ನಿಕಟಪೂರ್ವ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಅಯೋಧ್ಯೆಯ ಶ್ರೀರಾಮನ ತೊಟ್ಟಿಲು ಸೇವೆಗೆ ಕಾಷ್ಠ ಶಿಲ್ಪದಲ್ಲಿ ನಿರ್ಮಿಸಲಾದ ತೊಟ್ಟಿಲು ಅಯೋಧ್ಯೆ ತಲುಪಿದ್ದು, ಫೆ.7ರಂದು ಸಂಜೆ ನಡೆಯುವ ಉತ್ಸವದಲ್ಲಿ ಶ್ರೀಗಳ ಮೂಲಕ ಇದರ ಅರ್ಪಣೆಯಾಗಲಿದೆ.
ನೂತನ ತೊಟ್ಟಿಲಲ್ಲಿ ಶ್ರೀ ಬಾಲರಾಮ ದೇವರಿಗೆ ತೊಟ್ಟಿಲು ಸೇವೆ ನಡೆಯಲಿದೆ. ಶ್ರೀ ರಾಮ ದೇವರ ಮೂರ್ತಿಯನ್ನು ಈ ತೊಟ್ಟಿಲಲ್ಲಿ ತೂಗಿ ಅಷ್ಠಾವದಾನ ಸೇವೆ ಸಲ್ಲಿಸಲಾಗುವುದು ಎಂದು ರಘುಪತಿ ಭಟ್ ತಿಳಿಸಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ಬೀಟಿ ಮರದಿಂದ ನಿರ್ಮಿಸಲಾದ ಅತ್ಯಂತ ಸುಂದರ ಕಾಷ್ಠ ರಚನೆಗಳುಳ್ಳ ತೊಟ್ಟಿಲನ್ನು ಶ್ರೀ ರಾಮ ದೇವರ ಸೇವೆಗೆ ಅರ್ಪಿಸಿ ಆ ತೊಟ್ಟಿಲನ್ನು ನೋಡಿ ಧನ್ಯನಾದೆ ಎಂದು ರಘುಪತಿ ಭಟ್ ಭಾವುಕರಾದರು.