ಭ್ರಷ್ಟಾಚಾರ ಸೃಜನಪಕ್ಷಪಾತ ಜನವಿರೋಧಿ ಆಡಳಿತ ವಿರೋಧಿ ನೀತಿಯನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಕರೋಪಾಡಿ ಗ್ರಾಮ ಪಂಚಾಯತ್ ಮುಂಬಾಗದಲ್ಲಿ ಕರೋಪಾಡಿ ಶಕ್ತಿ ಕೇಂದ್ರದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದನ್ನೂ ಓದಿ : ಯುವವಾಹಿನಿ ಬಂಟ್ವಾಳ ಘಟಕದ ಪದಗ್ರಹಣ
ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು ಮಾತನಾಡಿ ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಿಂದ ಜನರ ಜೀವ ಹಿಂಡುವ ಭ್ರಷ್ಟ ಸರಕಾರ ಆಡಳಿತ ನಡೆಸುತ್ತಿದೆ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿಗಳಲ್ಲಿ ಸಿಗಬೇಕಾದ 9/11 ಇವತ್ತು ವರ್ಷವಿಡಿ ಮಂಗಳೂರಿಗೇ ಅಲೆದಾಡುವಂಥ ಸ್ಥಿತಿಗೆ ಕಾಂಗ್ರೆಸ್ ಸರಕಾರ ತಂದಿಟ್ಟಿದೆ. ಬಿಜೆಪಿ ಸರಕಾರ ಇದ್ದ ಸಂದರ್ಭದಲ್ಲಿ 5 ಸೆನ್ಸ್ ಭೂಮಿಯಿಂದ 25 ಸೆನ್ಸ್ ನವರೆಗೆ ಸ್ಥಳಿಯ ಗ್ರಾಮ ಪಂಚಾಯಿತಿಯಲ್ಲಿ ಆಡಳಿತದಲ್ಲಿ ಲಭಿಸುತ್ತಿತ್ತು ಈ ಭ್ರಷ್ಟ ಕಾಂಗ್ರೆಸ್ ಸರಕಾರ ಬಂದಮೇಲೆ ಭ್ರಷ್ಟ ರಾಜ್ಯ ಕಾಂಗ್ರೆಸ್ ಸರಕಾರದ ಖಜಾನೆ ತುಂಬಿಸುವ ದೃಷ್ಟಿಯಿಂದ ನಾಗರಿಕ ಬಂಧುಗಳ ಮೇಲೆ ಹೊರೆಯನ್ನ ತಂದಿಟ್ಟಿದ್ದ ನೀಚ ಮಟ್ಟಕ್ಕೆ ರಾಜ್ಯ ಸರಕಾರ ಇಳಿದಿದೆ ಎಂದರು.
ಅದಲ್ಲದೆ ಸ್ವಂತದೊಂದು ಸೂರುಬೇಕೆನ್ನುವ ದೃಷ್ಟಿಯಲ್ಲಿ ಇಟ್ಟುಕೊಂಡು ಕಳೆದ ಬಿಜೆಪಿ ಸರಕಾರ 94 ಸಿ ಮತ್ತು 94 ಸಿ ಸಿ ಯನ್ನ ವಿಲೇಜ್ ಅಕೌಂಟ್ ಆಫೀಸರ್ ಗಳ ಮೂಲಕ ಪರಿಶೀಲನೆ ಮಾಡಿ ಕೂಡಲೇ ತಹಶೀಲ್ದಾರ್ ಮತ್ತು ಶಾಸಕರ ಮೂಲಕ ಮನೆ ಕಟ್ಟಿ ಕುಳಿತ ಬಡವರಿಗೆ ಯಾವುದೇ ತೊಂದರೆ ಆಗಬಾರದು ಎಂಬ ದೃಷ್ಟಿಯಲ್ಲಿ ಹಕ್ಕುಪತ್ರಗಳನ್ನು ನೀಡುತ್ತಿತ್ತು ಈ ಭ್ರಷ್ಟ ಸರಕಾರ ಬಂದಮೇಲೆ ಎರಡು ವರ್ಷದಗಳಿಂದ ಯಾವುದೇ ರೀತಿಯ ಹಕ್ಕು ಪತ್ರಗಳನ್ನು ನೀಡಿಲ್ಲ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತಿಗೆ ಗಳಿಗೆ ಪ್ರಧಾನ ಮಂತ್ರಿ ಅವಾಸ್ ಯೋಜನೆ ಬಸವ ವಸತಿ ಯೋಜನೆ ಅಂಬೇಡ್ಕರ್ ವಸತಿ ಯೋಜನೆ ಯಾವುದೇ ಎರಡು ವರ್ಷದಿಂದ ಅನುಷ್ಠಾನಗೊಂಡಿಲ್ಲ
ಈ ಸಂದರ್ಭದಲ್ಲಿ ಕರೋಪಾಡಿ ಗ್ರಾಮದ ಹಿರಿಯರಾದ ವಿಘ್ನೇಶ್ವರ ಭಟ್. ಶಕ್ತಿ ಕೇಂದ್ರದ ಪ್ರಮುಖರಾದ ಮೋಹನ್ ದಾಸ್ ಪಲ್ಲದಕೋಡಿ. ಗ್ರಾಮ ಪಂಚಾಯತ್ನ ಗೌರವಾನ್ವಿತ ಸದಸ್ಯರಾದ ಅಶ್ವಥ್ ಶೆಟ್ಟಿ ಮಂಟಮೆ. ರಘುನಾಥ್ ಶೆಟ್ಟಿ. ಜಯರಾಮ ನಾಯಕ್. ಪ್ರಸನ್ನ ಪದ್ಯಾಣ. ಕರೋಪಾಡಿ ವ್ಯವಸಾಯ ಕ ಸೇವಾ ಸಹಕಾರಿ ಸಂಘದ ನಿರ್ದೇಶಕರುಗಳಾದ. ವಿಘ್ನೇಶ್ವರ ಭಟ್. ಶ್ರೀಪತಿ ಭಟ್ ಪದ್ಯಾಣ. ಹರೀಶ್ ಕೋಡ್ಲಾ. ದಾಮೋದರ ಶೆಟ್ಟಿ. ಅನುರಾಧ ಭಟ್ ಕಟ್ಟತಾರ್. ಬೂತ್ ಸಮಿತಿಯ ಅಧ್ಯಕ್ಷರುಗಳಾದ ಪದ್ಮನಾಭ ಮುಗುಳಿ. ಜಯರಾಮ್ ಭಟ್ ಕಟ್ಟತ್ತಾರ್. ಶಶಿಕಿರಣ್ ಶೆಟ್ಟಿ ಆನೆಯಾಲ. ಶ್ರೀಲತಾ ಶೆಟ್ಟಿ. ಗಾಯತ್ರಿ ವಿ ಭಟ್. ವನಮಾಲ ಮೇಲಾಂಟ. ವಿಶಾಲಾಕ್ಷಿ ಅನೆಯಾಳಗುತ್ತು. ಮತ್ತು ಪ್ರಮುಖ ಕಾರ್ಯಕರ್ತ ಬಂಧುಗಳು ಮತ್ತು ನಾಗರಿಕರು ಉಪಸ್ಥಿತರಿದ್ದರು.