ಬಂಟ್ವಾಳ: 2025ರ ಡಿಸೆಂಬರ್‌ನಲ್ಲಿ ನಡೆದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿಯ ವಿದ್ಯಾರ್ಥಿಗಳಾದ ಸ್ಪಂದನ.ಜೆ.ಶೆಟ್ಟಿ ೪೯೨, ವೈಷ್ಣವಿ.ಎಸ್.ಭಟ್ ೪೭೭, ರಿಧಾ ನಫೀಸ ಹಲ್ಯರ್ ೪೭೫, ವಿದಿಶ.ಸಿ.ಕೆ ೪೬೭, ಜೋಶಲ್ ಡಿ’ಸೋಜ ೪೫೭, ಶಿವಾನಿ ೪೫೬, ದೇವಾನ್ಶ್ ೪೫೪, ಪ್ರಣವಿ.ಪಿ ಸುವರ್ಣ ೪೫೪, ಮನ್ವಿತ್ ಕುಮಾರ್.ಎಸ್. ೪೫೦, ಸುಸಾನ್ ಸಾರ್ವ.ವಿ. ೪೪೩ ಅಂಕಗಳೊAದಿಗೆ ಎಲ್ಲಾ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇದನ್ನೂ ಓದಿ : ಬಾದಾಮಿಯ ಇಮ್ಮಡಿ ಪುಲಿಕೇಶಿ ವೇದಿಕೆಯಲ್ಲಿ ಇಂದು ಸಂಜೆ ಆಯೋಜಿಸಿದ್ದ “ಚಾಲುಕ್ಯ ಉತ್ಸವ -2026” ರ ಉದ್ಘಾಟನಾ ಸಮಾರಂಭ

ಇವರಿಗೆ ಶಾಲಾ ಸಂಚಾಲಕರಾದ ಶ್ರೀಮತಿ ಕೆ ರೇಖಾ ಶೆಣೈ, ಮುಖ್ಯ ಶಿಕ್ಷಕರಾದ ಶ್ರೀಹರಿಪ್ರಸಾದ್, ಶ್ರೀಮತಿ ಚೈತ್ರಾ ಶೆಟ್ಟಿ ಹಾಗೂ ಶ್ರೀಮತಿ ವೀಣಾ ದೇವಾಡಿಗ ಇವರು ಶುಭ ಹಾರೈಸಿದ್ದಾರೆ. ಚಿತ್ರಕಲಾ ಶಿಕ್ಷಕರಾದ ಶ್ರೀ ರಾಜೇಂದ್ರ ನಾಯಕ್ ಮಾರ್ಗದರ್ಶನ ನೀಡಿರುತ್ತಾರೆ.