ಆಗತ ಸ್ವಾಗತ ಕಾರ್ಯಕ್ರಮ 

ಕಲ್ಲಡ್ಕ:  ಶ್ರೀರಾಮ ಪ್ರೌಢ ಶಾಲೆಯ ಮಧುಕರ ಸಭಾಂಗಣದಲ್ಲಿ ೨೦೨೫-೨೬ನೇ ಸಾಲಿನ ಹೊಸದಾಗಿ ಸೇರ್ಪಡೆಗೊಂಡಂತಹ ವಿದ್ಯಾರ್ಥಿಗಳಿಗೆ ಆಗತ ಸ್ವಾಗತ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಆರತಿ ಬೆಳಗುವುದರ ಮೂಲಕ ಸ್ವಾಗತಿಸಲಾಯಿತು. ಅತಿಥಿಅಭ್ಯಾಗತರು ದೀಪ ಪ್ರಜ್ವಲನೆ ಮಾಡಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕರ‍್ಯಕ್ರಮಕ್ಕೆ ಚಾಲನೆ ನೀಡಿದರು.  ಇದನ್ನೂ ಓದಿ : ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬಂಟ್ವಾಳ,  ಇಲ್ಲಿ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ

ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರು ಹಾಗೂ ಮಾರ್ಗದರ್ಶಕರು, ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್‌ ಕಲ್ಲಡ್ಕಅವರ ಅಧ್ಯಕ್ಷೀಯ ಮಾತುಗಳಲ್ಲಿ” ಶಿಕ್ಷಣದ ಮೂಲಕ ದೇಶದ ಪ್ರಗತಿ ಹಾಗೂ ಸಂಸ್ಕಾರಯುತ ಶಿಕ್ಷಣದಿಂದ ಉತ್ತಮಗುಣ ನಿರ್ಮಾಣ ಸಾಧ್ಯ” ಎಂದು ಮಾರ್ಗದರ್ಶನ ಮಾಡಿದರು.

ಮೌಲ್ಯಾಧಾರಿತ ಶಿಕ್ಷಣದಿಂದ ಭಾರತದ ಸಂಸ್ಕೃತಿ ಪರಂಪರೆಯನ್ನು ಅಳವಡಿಸಿಕೊಳ್ಳಬೇಕೆಂದು” ವಿಶ್ವನಾಥಯ್ಯ ಮಾತಂ(ರಿಜಿಸ್ಟರ್, ಅಲಯನ್ಸ್ ವಿಶ್ವವಿದ್ಯಾನಿಲಯ ಬೆಂಗಳೂರು) ಇವರುತಿಳಿಸಿದರು. ಬೋಳ ರಾಘವೇಂದ್ರಕಾಮತ್ ಪ್ರೆöವೇಟ್ ಲಿಮಿಟೆಡ್‌ ಕಾರ್ಕಳ ಇದರ ನಿರ್ದೇಶಕರಾಗಿರುವ ಶ್ರೀಮತಿ ಬೋಳ ವಿದ್ಯಾಕಾಮತ್. ಹಾಗೂ ಬೆಳ್ತಂಗಡಿಯ ಧಾರ್ಮಿಕ ಮುಖಂಡರು, ಸಮಾಜ ಸೇವಕರು ಆಗಿರುವ ಶ್ರೀ ಕಿರಣ್‌ ಚಂದ್ರ ಪುಷ್ಪಗಿರಿ, ಶ್ರೀ ವಿಶ್ವಾಸ್‌ರಾವ್‌ಉಚ್ಚಿಲ (ಆಡಳಿತ ನಿರ್ದೇಶಕರು, ಸಾವಿತ್ರಿ ಮೆಮೊರಿಯಲ್‌ಚಾರಿಟೇಬಲ್ ಟ್ರಸ್ಟ್ ಮಂಗಳೂರು) ಹಾಗೂ ಅವರ ಪತ್ನಿ ಶ್ರೀಮತಿ ಪ್ರೇಕ್ಷ ವಿಶ್ವಾಸರಾವ್, ಎ.ಬಿ ಶೆಟ್ಟಿ ಮೆಮೋರಿಯಲ್‌ ಇನ್ಸಿ÷್ಟಟ್ಯೂಟ್‌ ಆಫ್‌ಡೆಂಟಲ್ ಸೈನ್ಸ್ ನಿಟ್ಟೆ, ದೇರಳಕಟ್ಟೆಯಲ್ಲಿನ ಪ್ರೊಫೆಸರ್‌ ಆಗಿರುವ ಶಿಶಿರ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಣಿ ಸದಸ್ಯರು ಆಗಿರುವ ಡಾ| ಕಮಲ ಪ್ರಭಾಕರ್ ಭಟ್, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ಶ್ರೀ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ ಶ್ರೀಮಾನ್, ಸಹ ಸಂಚಾಲಕರಾದ ರಮೇಶ್ ಶ್ರೀಮಾನ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ್ ಎಂ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಅಗ್ನಿಹೋತ್ರಕ್ಕೆ ಘೃತಾಹುತಿಯನ್ನು ಮಾಡಿ, ಭಾರತಾಂಬೆಗೆ ಪುಷ್ಪಾರ್ಚನೆ ಮತ್ತು ಹಿರಿಯರಿಂದ ತಿಲಕಧಾರಣೆಯೊಂದಿಗೆ ಆಶೀರ್ವಾದ ಪಡೆದರು.

೨೦೨೪-೨೫ನೇ ಸಾಲಿನ ಎಸ್,ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಧಾತ್ರಿ ಮತ್ತು ಶರಣ್ಯ ಗೀತೆಯನ್ನು ಹಾಡಿದರು, ಚಿನ್ಮಯ್ ನಿರೂಪಿಸಿ, ಭುವಿ ಸ್ವಾಗತಿಸಿ, ಅಂಕಿತ ವಂದಿಸಿದರು.