ವಿಶ್ವ ಪರಿಸರ ದಿನಾಚರಣೆ
ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾದ ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ ಹಾಗೂ (ಮಂಗಳೂರು ಗ್ರಾಮಾಂತರ ಜಿಲ್ಲಾ ಪರ್ಯಾವರಣ ಸಂಯೋಜಕರಾದ ಕಮಲಾಕ್ಷ ಶಂಭೂರು ಮತ್ತು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಗೋಪಾಲ್ ಶ್ರೀಮಾನ್ ಔಷಧೀಯ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾದ ಕಮಲಾಕ್ಷ ಶಂಭೂರು ಅವರು ಮಾತನಾಡಿ” ಪರಿಸರ ದಿನವನ್ನು ಕೇವಲ ಈ ದಿನಕ್ಕೆ ಮೀಸಲಿಡದೆ ಪ್ರತಿದಿನವೂ ಪರಿಸರವನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಮಾಡಬೇಕೆಂದರು.ಈ ಸಂದರ್ಭದಲ್ಲಿ ಪರಿಸರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು. ಇದನ್ನ ಓದಿ :ಪ್ರಿಯರಕನೊಂದಿಗೆ ಚಕ್ಕಂದವಾಡ್ತಾ ಸಿಕ್ಕಿಬಿದ್ದ ಪತ್ನಿ – ಆಕೆಯನ್ನ ಕೊಂದು ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದ ಪತಿ
ಕಾರ್ಯಕ್ರಮದಲ್ಲಿ ಪರಿಸರ ಗೀತೆಯನ್ನು ವಿದ್ಯಾರ್ಥಿಗಳು ಹಾಡಿದರು, ಪರಿಸರ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಸಿ ವಿತರಣೆಯನ್ನು ಮಾಡಲಾಯಿತು. ಪರಿಸರಕ್ಕೆ ಸಂಬಂಧಿಸಿದ ಘೋಷಣೆಯನ್ನು ಶ್ರೀ ಜಿನ್ನಪ್ಪ ಶ್ರೀಮಾನ್ ಇವರು ವಿದ್ಯಾರ್ಥಿಗಳಿಂದ ಹೇಳಿಸಿದರು. ಕಾರ್ಯಕ್ರಮವನ್ನು ಸುಕೇಶ್ ನಿರೂಪಿಸಿ, ರಮ್ಯಾ ಸ್ವಾಗತಿಸಿ, ಗಾನವಿ ವಂದಿಸಿದಳು. ಕಾರ್ಯಕ್ರಮವು ಶಾಂತಿ ಮಂತ್ರದೊಂದಿಗೆ ಕೊನೆಗೊಂಡಿತು. ಇದನ್ನೂ ಓದಿ :ವಗ್ಗ: ಕೈ ಕಾಲು ತೊಳೆಯುವ ವೇಳೆ ಕೆರೆಗೆ ಬಿದ್ದು ಕಾಲೇಜು ವಿದ್ಯಾರ್ಥಿ ಮೃತ