ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಜು.23ರಂದು ಗುರಪೂರ್ಣಿಮೆಯನ್ನು ಆಚರಿಸಲಾಯಿತು.
ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯ ಸುಜಿತ್ ಕೊಟ್ಟಾರಿ ಗುರು ಪೂರ್ಣಿಮೆಯ ಮಹತ್ವ ತಿಳಿಸುತ್ತಾ, “ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆಯಾಗಿ ಆಚರಿಸಲಾಗುತ್ತದೆ.

ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯ ಸುಜಿತ್ ಕೊಟ್ಟಾರಿ ಗುರು ಪೂರ್ಣಿಮೆಯ ಮಹತ್ವ ತಿಳಿಸಿದರು
ಗುರು ಪ್ರತಿಯೊಬ್ಬ ವ್ಯಕ್ತಿಗೂ ಸರಿಯಾದದಾರಿ ತೋರಿಸುವ ವ್ಯಕ್ತಿ. ಗುರುಗಳು ತಮ್ಮ ಪಾಠ ಮತ್ತು ಬುದ್ಧಿವಂತಿಕೆಯಿಂದ ಜಗತ್ತನ್ನು ನಿರಂತರವಾಗಿ ಬೆಳಗಿಸುವ ವ್ಯಕಿಯಾಗಿದ್ದಾನೆ. ಗುರುಓರ್ವ ವ್ಯಕ್ತಿಗೆ ಸದಾಚಾರದ ಮಾರ್ಗವನ್ನುಅನುಸರಿಸಲುಯಾವಾಗಲೂ ಪ್ರೋತ್ಸಾಹಿಸುತ್ತಾನೆ ಹಾಗೂ ಜೀವನದ ಪ್ರತಿಯೊಂದು ಪಾಠವನ್ನು ಕಲಿಸುತ್ತಾನೆ. ಗುರು ಎನ್ನುವ ಶಬ್ದ ಗು ಮತ್ತು ರುಅನ್ನುವ ಮೂಲ ಪದವನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿಗು ಅಂದರೆ ಅಂಧಕಾರ/ ಅಜ್ಞಾನ, ರು ಎಂದರೆ ಕಳೆಯುವವ ಎಂದರ್ಥ. ಅದಕ್ಕೆ ಗುರು ಎಂದರೆ ಅಂಧಕಾರ ಕಳೆಯುವವ ಎಂದರ್ಥ.

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ- ಗುರುಪೂರ್ಣಿಮೆ ಆಚರಣೆ
ಗುರುವೆಂದರೆ ಕೇವಲ ಶಿಕ್ಷಕರಷ್ಟೇ ಅಲ್ಲ ಜೀವನದಲ್ಲಿ ಸರಿಯಾದದಾರಿ ತೋರುವ ಪ್ರತಿಯೊಬ್ಬರೂ ಗುರುಗಳೇ. ನೀವೂ ಕೂಡ ನಿಮ್ಮ ಗುರುಗಳ ಮಾರ್ಗದರ್ಶನದಲ್ಲಿ ಸಮಾದಲ್ಲಿ ಒಳ್ಳೆಯ ವ್ಯಕ್ತಿಯಾಗಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಹ ಮುಖ್ಯೋಪಾಧ್ಯಾಯ ಸುಮಂತ್ ಆಳ್ವ ಎಂ. ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಲತಿಕಾ ನಿರೂಪಿಸಿ, ರಾಜೇಶ್ವರಿ ಭಟ್ ಸ್ವಾಗತಿಸಿ, ಭೂಮಿಕಾ ವಂದಿಸಿದರು.