ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.9ರಂದು ವಿಶ್ವ ಸಾಗರ ದಿನಾಚರಣೆ ಆಚರಿಸಲಾಯಿತು. ಸಾಗರ ಸಂರಕ್ಷಣೆಯನ್ನುಉತ್ತೇಜಿಸಲು ಮತ್ತು ಸಾಗರದ ಮಹತ್ವವನ್ನುಅರಿವು ಮೂಡಿಸಲು ಪ್ರತೀ ವರ್ಷ ಜೂನ್ ೮ ರಂದು ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತಿದೆ.
“ಭೂಮಂಡಲದ 3ನೇ ಒಂದು ಭಾಗವನ್ನು ಆಕ್ರಮಿಸಿರುವ ಸಾಗರಗಳಿಂದಾಗಿಯೇ ನಮ್ಮ ಗ್ರಹ ನೀಲಿ ಬಣ್ಣದಿಂದ ಕಂಗೊಳಿಸುತ್ತದೆ. ಸಾಗರವು ಭೂಮಿಯ ಮೇಲ್ಮೈಯ 70% ಕ್ಕಿಂತ ಹೆಚ್ಚು ವ್ಯಾಪಿಸಿದೆ ಮತ್ತುಎಲ್ಲಾ ಜೀವಿಗಳ ಅಸ್ತಿತ್ವಕ್ಕೆ ನಿರ್ಣಾಯಕವಾಗಿದೆ.
ಸಾಗರದ ಪ್ರಾಮುಖ್ಯತೆ ತಿಳಿದಿದ್ದರೂ, ಮಾನವರು ಅವುಗಳನ್ನು ಅಪಾಯಕಾರಿದರದಲ್ಲಿ ಶೋಷಣೆ ಮತ್ತು ಮಾಲಿನ್ಯವನ್ನು ಮುಂದುವರೆಸುತ್ತಿದ್ದಾರೆ. ಸಾಗರವು ನಮ್ಮ ಆರ್ಥಿಕತೆಯ ಪ್ರಮುಖ ಭಾಗವಾಗಿದ್ದು, ಲಕ್ಷಾಂತರ ಜನರಿಗೆ ಉದ್ಯೋಗ ಮತ್ತು ಶತಕೋಟಿ ಜನರಿಗೆ ಆಹಾರವನ್ನು ಒದಗಿಸುತ್ತದೆ.
ಸಾಗರವು ಪ್ರಪಂಚದಾದ್ಯಂತ ಜನರನ್ನು ಸಂಪರ್ಕಿಸುತ್ತದೆ, ಪೋಷಿಸುತ್ತದೆ ಮತ್ತು ಬೆಂಬಲಿಸುತ್ತದೆ. ಸಾಗರಗಳು ಭೂಮಿ ಹಾಗೂ ಮಾನವಕುಲದ ಜೀವನಾಡಿಯಾಗಿದೆ. ಭೂಮಿಯನ್ನು ತಂಪುಗೊಳಿಸುವ ಏಕೈಕ ಮೂಲ ಮಳೆ. ಹೀಗಾಗಿ ಏರುವ ತಾಪಮಾನವನ್ನು ನಿಯಂತ್ರಿಸುತ್ತಿರುವ ಏಕೈಕ ತಾಣ ಸಾಗರಗಳು.
ವಿಶ್ವ ಸಾಗರ ದಿನವು ಸಮುದ್ರವು ಹದಗೆಡದಂತೆ ರಕ್ಷಿಸುವ ಕಾರಣವನ್ನು ಒತ್ತಿ ಹೇಳುತ್ತದೆ. ಇದು ಸಾಗರಗಳ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಮುದ್ರದ ನೀರನ್ನು ಉಳಿಸಲು ಕಾರ್ಯಪ್ರವೃತ್ತರಾಗುವ ಉದ್ದೇಶವನ್ನು ಒತ್ತಿ ಹೇಳುತ್ತದೆ ಎಂದು ಶ್ರೀರಾಮ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಸಾಗರದ ಮಹತ್ವವನ್ನು ತಿಳಿಸಿಕೊಟ್ಟರು.
ವಿಶ್ವ ಸಾಗರ ದಿನದ ಅಂಗವಾಗಿ, ವಿದ್ಯಾರ್ಥಿಗಳಿಗೆ ಚರ್ಚೆ ಮತ್ತು ಗೋಷ್ಟಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀರಾಮ ಪ್ರಾಥಮಿಕ ವಿಭಾಗದ ಸಹ ಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ ಎಂ., ಸಂಸ್ಕೃತ ವಿಭಾಗ ಮುಖ್ಯಸ್ಥರಾದ ಅನ್ನಪೂರ್ಣ ಎನ್. ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಮಾನಸ ನಿರೂಪಿಸಿ, ಭೂಮಿಕಾ ಸ್ವಾಗತಿಸಿ, ಲತಿಕಾ ವಂದಿಸಿದರು.