ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಯೋಗದಿನವನ್ನುಆಚರಿಸಲಾಯಿತು.
ವಿವೇಕಾನಂದರು ಯೋಗ -ಧ್ಯಾನದ ಪರಮಾವಧಿಯನ್ನು ಹೊಂದಿರುವವರು. ಶಿಕ್ಷಣದ ಜೊತೆಗೆ ನಮ್ಮ ಸಾಮಾಜಿಕ ಬದುಕು ಕೂಡ ಅಚ್ಚುಕಟ್ಟಾಗಿರಬೇಕು. ನಮ್ಮ ಸಂಕಲ್ಪ ಪೂರೈಕೆಯಾಗಬೇಕಾದರೆ ಯೋಗ ಪ್ರಮುಖವಾಗಿದೆ.
ಯೋಗ ಎಂದರೆ ಹಿಡಿತದಲ್ಲಿಟ್ಟುಕೊಳ್ಳುವುದು ಎಂಬ ಅರ್ಥ. ಇದು ಪಂಚೇಂದ್ರಿಯಗಳನ್ನು ಹಿಡಿತದಲ್ಲಿಟ್ಟು ಕೊಳ್ಳುತ್ತದೆ. ಕರ್ಮದಲ್ಲಿ ಕರ್ತವ್ಯವನ್ನು ಸಾಧಿಸುವುದು. ಕರ್ಮಎಂದರೆ ಕೆಲಸ. “ಯೊಗಚಿತ್ತ ವೃತ್ತಿ ನಿರೋಧಃಯೋಗಕರ್ಮ ಕೌಶಲಃ”.ಪ್ರತಿಯೊಬ್ಬ ವ್ಯಕ್ತಿಯು ದುಃಖದಿಂದ ಜರ್ಜರಿತವಾದಾಗ ಮನಸ್ಸಿನ ದೌರ್ಬಲ್ಯಗಳಿಂದ ಪಾರುಮಾಡುವುದೇ ಯೋಗ.
ಮನಸ್ಸಿನ ಚಂಚಲತೆ, ಕೋಪ, ತಾಪಗಳನ್ನು ದೂರಮಾಡುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಯೋಗ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ರೋಗ ನಿವಾರಣೆಯಾಗುತ್ತದೆ. ನಮ್ಮಲ್ಲಿ ಅದ್ಭುತ ಶಕ್ತಿ ಹೆಚ್ಚಾಗುತ್ತದೆ ಎಂದು ವಿಶ್ವಹಿಂದೂ ಪರಿಷತ್‌ನ ಶ್ರೀ ಸೀತಾರಾಮ್ ಭಟ್‌ಮಕ್ಕಳಿಗೆ ಯೋಗದ ಮಹತ್ವ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿಯೋಗ ಶಿಕ್ಷಕಿ ದೇವಕಿಯೋಗ ಪ್ರತಿಜ್ಞೆಯನ್ನು ಮಾಡಿಸಿದರು. ವಿದ್ಯಾರ್ಥಿನಿಯಾದ ಮಾನಸ ಯೋಗಗೀತೆಯನ್ನು ಹಾಡಿದಳು. ನಂತರ ವಿದ್ಯಾರ್ಥಿನಿಯರುಯೋಗ ನೃತ್ಯವನ್ನು ಮಾಡಿದರು.
ಕಾರ್ಯಕ್ರಮದ ಮೊದಲಿಗೆ ಅಧ್ಯಾಪಕ ವೃಂದದವರಿಂದ ಯೋಗಭ್ಯಾಸ ನಡೆಯಿತು. ಈ ಸಂದರ್ಭದಲ್ಲಿ ಶ್ರೀರಾಮ ಅಡಳಿತ ಮಂಡಳಿಯ ಆಹ್ವಾನಿತ ಸದಸ್ಯರಾದ ಅಜಿತ್ ಕೂಡಾ ಯೋಗಭ್ಯಾಸದಲ್ಲಿ ಪಾಲ್ಗೋಂಡರು.
ನಂತರ ಬಾಲಕರು ಹಾಗೂ ಬಾಲಕಿಯರಿಗೆ ಯೋಗಭ್ಯಾಸ ಮಾಡಿಸಲಾಯಿತು.
ವೇದಿಕೆಯಲ್ಲಿ ಸಹಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ ಎಂ, ಪೂರ್ವಗುರುಕುಲದ ಪ್ರಮುಖರಾದ ರೂಪಕಲಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಸಾನ್ವಿ ನಿರೂಪಿಸಿ, ವರ್ಷ ಸ್ವಾಗತಿಸಿ, ಸ್ವಸ್ತಿಕ್ ವಂದಿಸಿದರು.