ಕಲ್ಲಡ್ಕ: ನಾವು ಜೀವನದಲ್ಲಿ ಹೇಗೆ ಒಬ್ಬ ಮನುಷ್ಯನಾಗಿ ಬದುಕಬೇಕು ಎಂಬುವುದನ್ನು ತೋರಿಸಿಕೊಟ್ಟವರು ಸ್ವಾಮಿ ವಿವೇಕಾನಂದರು ಎಂದು ಕರ್ನಾಟಕ ಧಾರ್ಮಿಕ ಪರಿಷತ್ ಮಾಜಿ ಸದಸ್ಯರು, ವಿಶ್ವಹಿಂದೂ ಪರಿಷತ್ತಿನ ಜಿಲ್ಲಾ ಸತ್ಸಂಗ ಪ್ರಮುಖ್, ಧಾರ್ಮಿಕ ಚಿಂತಕ ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದರು.

ಅವರು ಜ. ೧೨ ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆದ ವಿವೇಕಾನಂದಜಯAತಿ ಕರ‍್ಯಕ್ರಮದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.

ಜೀವನದಲ್ಲಿ ಯಾವುದೇ ಸಮಸ್ಯೆ ಬಂದಾಗ ಎದುರಿಸಿ ನಿಲ್ಲುವ ಮನಸ್ಸು, ಶರೀರ ಬಲ ನಮ್ಮಲ್ಲಿರಬೇಕು ಎಂಬುದು ವಿವೇಕಾನಂದರ ಸಂದೇಶವಾಗಿತ್ತು. ಅವರು ಹೇಳಿದ ಒಂದೊAದು ಮಾತುಗಳು ನಮ್ಮಜೀವನಕ್ಕೆ ಪ್ರೇರಣೆಯಾಗಬೇಕು. ನಮ್ಮ ವ್ಯಕ್ತಿತ್ವ ಹೇಗೆ ಇರಬೇಕು ಎಂದರೆ ಉಳಿದವರು ನಮಗೆ ಗೌರವಕೊಡುವ ಹಾಗೆ ಇರಬೇಕು. ವಿವೇಕಾನಂದರ ಜನ್ಮ ದಿನ ನಮಗೆ ವ್ಯಕ್ತಿತ್ವವನ್ನು ಚೆನ್ನಾಗಿ ರೂಪಿಸಿಕೊಳ್ಳಲು ನಮಗೆ ಪ್ರೇರಣೆಯಾಗಲಿ ಎಂದರು.

ಬಳಿಕ ಹಿರಿಯ ವಿದ್ಯಾರ್ಥಿನಿ ಅನಘ ಈ ಶಾಲೆಯಲ್ಲಿ ಕಳೆದ ಬಾಲ್ಯದ ನೆನಪುಗಳನ್ನು ಮಕ್ಕಳಲ್ಲಿ ಹಂಚಿಕೊAಡರು

ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಸುಧಾ ಸೂರ್ಯಭಟ್, ಆದಿತ್ಯ ಕೃಷ್ಣಾ ಹಾಗೂ ಮುಖ್ಯ ಶಿಕ್ಷಕ ವಿರಾಜ್‌ ಕಣಂತೂರು ಉಪಸ್ಥಿತರಿದ್ದರು.

ಶಿಕ್ಷಕ ಸುಮಂತ್‌ಆಳ್ವ ಸ್ವಾಗತಿಸಿ, ವಿದ್ಯಾರ್ಥಿನಿ ವೈಷ್ಣವಿ ಕಾವiತ್ ವಂದಿಸಿ, ಕರ‍್ಯಕ್ರಮ ನಿರೂಪಿಸಿದರು.