ಬಾಳ್ತಿಲ ಗ್ರಾಮದ ಸುಧೆಕ್ಕಾರು ಶ್ರೀ ರಕ್ತೇಶ್ವರಿ ದೇವಸ್ಥಾನದ ವಠಾರದಲ್ಲಿ ಜೂ.5ರಂದು ವಿಶ್ವ ಪರಿಸರ ದಿನ ಪ್ರಯುಕ್ತ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಸಂಘದ ವಿದ್ಯಾರ್ಥಿಗಳ ಜೊತೆಗೂಡಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಂಟ್ವಾಳ ವಲಯ ಉಪ ಅರಣ್ಯಾಧಿಕಾರಿ, ರವಿರಾಜ್ ಬಿ. ಮಾತನಾಡುತ್ತಾ “ಗಿಡವನ್ನು ನೆಡುವುದರಿಂದ ಸುತ್ತಮುತ್ತಲಿನ ವಾತಾವರಣ ತಂಪಾಗಿರುತ್ತದೆ. ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ಪ್ರಾಣಿ ಪಕ್ಷಿಗಳಿಗೂ ಇದರಿಂದ ಒಳ್ಳೆಯದಾಗುತ್ತದೆ . ಜೂನ್ 5ರ ಪರಿಸರ ದಿನಾಚರಣೆಗೆ ಮಾತ್ರ ಸೀಮಿತವಾಗಿರದೆ ಪರಿಸರದ ಕಾಳಜಿಯಿಂದ ಉಳಿದ ಸಂದರ್ಭದಲ್ಲಿಯು ಮನೆ ಹಾಗೂ ಶಾಲೆಯ ಸುತ್ತಮುತ್ತ ಗಿಡ ನೆಟ್ಟು ನೀರು ಹಾಕಿ ಗಿಡವನ್ನು ಬೆಳೆಸಿ, ಸುತ್ತಮುತ್ತಲಿನ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಿ .
ಹುಟ್ಟುಹಬ್ಬ ದಿನದಂದು ಗಿಡ ನೆಟ್ಟು ಪೋಷಿಸಿ. ವಿಜ್ಞಾನ ಸಂಘದಿಂದ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ತುಂಬಾ ಖುಷಿಯ ವಿಚಾರ , ಪರಿಸರದ ದೃಷ್ಟಿಯಿಂದ ಇನ್ನು ಮುಂದೆಯು ಕೂಡ ಇಂತಹ ಒಳ್ಳೆಯ ಕೆಲಸ ಮಾಡಿ“ ಎಂದು ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಸುಮಂತ್ ಮಕ್ಕಳಿಗೆ ಪರಿಸರದ ಮಹತ್ವವನ್ನು ತಿಳಿಸಿಕೊಟ್ಟರು. ವಿದ್ಯಾರ್ಥಿನಿಯಾದ ಮಾನಸ ವೈಯಕ್ತಿಕ ಗೀತೆಯನ್ನು ಹಾಡಿದಳು.
ಈ ಸಂದರ್ಭದಲ್ಲಿ ಮಾಣಿ ವಲಯ ಗಸ್ತು ವನಪಾಲಕರಾದ ರಾಘವೇಂದ್ರ , ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಚಂದ್ರಶೇಖರ್ ಸಾಲ್ಯಾನ್, ಜಯರಾಮ ಸುಧೆಕ್ಕಾರು, ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು , ಪಿ. ಕೆ.
ಪದ್ಮನಾಭ ಅಧ್ಯಾಪಕರಾದ ಅನ್ನಪೂರ್ಣ, ಜ್ಯೋತಿಶ್ರಿ, ರಕ್ಷಿತಾ, ಬಾಲಕೃಷ್ಣ, ವಾಣಿಶ್ರೀ, ಮಾಲತಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಧನ್ಯ ಸ್ವಾಗತಿಸಿ, ಪ್ರಾಪ್ತಿ ನಿರೂಪಿಸಿ, ಶಶಾಂಕ ವಂದಿಸಿದರು.
,