ಗುರು ಪೂಜಾ ಉತ್ಸವ
ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಯ ಮಧುಕರ ಸಭಾಂಗಣದಲ್ಲಿ ಗುರುಪೂಜಾ ಉತ್ಸವವನ್ನು ಆಚರಿಸಲಾಯಿತು. ಅತಿಥಿ ಅಭ್ಯಾಗತರು ದೀಪ ಬೆಳಗಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಕಾರ್ಯನಿರ್ವಹಣಾಧಿಕಾರಿ ಹಾಗೂ ಪದವಿ ವಿಭಾಗದ ಪ್ರಾಂಶುಪಾಲರಾದ ಶ್ರೀ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ. ಅವರು ಗುರುಪೂರ್ಣಿಮೆಯ ಮಹತ್ವ ಹಾಗೂ ಜ್ಞಾನಪರಂಪರೆಯನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದವರು ಶ್ರೀ ಕೆ ರಾಮಣ್ಣಗೌಡ (ಕೆನರಾ ಹೈಸ್ಕೂಲ್‌ಡೊಂಗರಕೇರಿ ಮತ್ತುಕೆನರ ಹೈಸ್ಕೂಲ್‌ಊರ್ವಇಲ್ಲಿನ ನಿವೃತ್ತ ಶಿಕ್ಷಕರು) ಅವರು ವಿದ್ಯಾರ್ಥಿಗಳಿಗೆ ಗುರುಗಳ ಮಹತ್ವ ಹಾಗೂ ತಮ್ಮ ಮುಂದಿನ ಜೀವನದಲ್ಲಿ ಗುರುಗಳನ್ನು ಸ್ಮರಿಸಬೇಕು ಎಂದು ತಿಳಿಸಿದರು ಹಾಗೂ ಇವರ ಪತ್ನಿ ಶ್ರೀಮತಿ ಸೀತಮ್ಮ (ಹಿರಿಯ ಪ್ರಾಥಮಿಕ ಶಾಲೆ ಗಡಿಯಾರಇಲ್ಲಿನ ನಿವೃತ್ತ ಮುಖ್ಯ ಶಿಕ್ಷಕಿ) ಹಾಗೂ ಶ್ರೀಮತಿ ಸುಜಾತ (ನಿವೃತ್ತ ಶಿಕ್ಷಣ ಸಂಯೋಜಕರು ಬಂಟ್ವಾಳ). ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕರ‍್ಯಕ್ರಮದಲ್ಲಿಈ ಹಿರಿಯ ಶಿಕ್ಷಕ ಶಿಕ್ಷಕರಿಗೆ ಗುರುವಂದನಾ ಸಲ್ಲಿಸಲಾಯಿತು. ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕರಾದ ಶ್ರೀ ರಮೇಶ್ ಶ್ರೀಮಾನ್, ಪ್ರೌಢಶಾಲೆಯ ಮುಖ್ಯ ಗುರುಗಳಾದ ಗೋಪಾಲ್ ಶ್ರೀಮಾನ್ ಮತ್ತು ಶ್ರೀ ಧೀರಜ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಭಾರತಾಂಬೆಗೆ ಪುಷ್ಪಾರ್ಚನೆ ಮಾಡಿಎಲ್ಲಾಗುರು ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು.ದಾಕ್ಷಾಯಿಣಿ ಮತ್ತುಚೈತನ್ಯ ಶಾರದ ಪ್ರೇರಣಾಗೀತೆಯನ್ನು ಹಾಡಿದರು.ಕಾರ್ಯಕ್ರಮವನ್ನು ಜಸ್ಮಿತಾ ನಿರೂಪಿಸಿ, ಭುವಿ ಸ್ವಾಗತಿಸಿ, ಸಾಧ್ವಿ ವಂದಿಸಿ, ಶಾಂತಿ ಮಂತ್ರದೊಂದಿಗೆ ಕೊನೆಗೊಳಿಸಲಾಯಿತು.