ವಿಶ್ವಯೋಗ ದಿನಾಚರಣೆ
ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲಾ ವತಿಯಿಂದ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಮತ್ತು ಮಧುಕರ ಸಭಾಂಗಣದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಣಿ ಸದಸ್ಯರಾದ ಡಾ| ಕಮಲ ಪ್ರಭಾಕರ್ ಭಟ್ ಮಾತನಾಡಿ”ಯೋಗವು ಮನುಷ್ಯನ ಶಾರೀರಿಕ ಹಾಗೂ ಮಾನಸಿಕ ನೆಮ್ಮದಿಯಾಗಿದೆ ಎಂದರು. ಅಲ್ಲದೇ ಯೋಗದಿಂದಾಗುವ ಪ್ರಯೋಜನಗಳನ್ನು ಸವಿವರವಾಗಿ ತಿಳಿಸಿದರು. ಇದನ್ನೂ ಓದಿ : ಮಾಜಿ ಸಚಿವರಾದ ದಿ. ಕೆ.ಹೆಚ್.ಪಾಟೀಲ್ ಅವರ ಪ್ರತಿಮೆ ಲೋಕಾರ್ಪಣೆ
ಕಾರ್ಯಕ್ರಮದಲ್ಲಿ ಶ್ರೀಮತಿ ಸರಸ್ವತಿ (ದಕ್ಷಿಣ ಕರ್ನಾಟಕ ಮಹಿಳಾ ಪತಂಜಲಿ ಯೋಗ ಸಮಿತಿಯ ಕಾರ್ಯಕಾರಣಿ ಸದಸ್ಯರು) ಹಾಗೂ ಶ್ರೀಮತಿ ಮಂಜುಳಾ (ಗಮಕ ವಾಚಕಿ, ಮಹಿಳಾ ಪತಂಜಲಿ ಯೋಗ ಸಮಿತಿ ಬಂಟ್ವಾಳ ತಾಲೂಕು ಪ್ರಭಾರಿ) ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ನಡೆಸುತ್ತಿರುವ ಜ್ಯೋತಿಕ್ ಐ ಆರ್ ಹಾಗೂ ಶ್ರೀರಾಮ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ರಾಜೇಶ್ವರಿ ಮಾತಾಜಿ, ಮುಖ್ಯೋಪಾಧ್ಯಾಯರಾದ ಗೋಪಾಲ್ ಶ್ರೀಮಾನ್, ಪ್ರೌಢ ಶಾಲೆಯ ಶಿಕ್ಷಕರಾದ ಜಿನ್ನಪ್ಪ ಶ್ರೀಮಾನ್ ಹಾಗೂ ಸುಜಿತ್‌ಕೊಟ್ಟಾರಿ, ಪತಂಜಲಿ ಯೋಗ ಸಮಿತಿ ಮತ್ತು ಮಹಿಳಾ ಪತಂಜಲಿ ಯೋಗ ಸಮಿತಿ, ಆಶೀರ್ವಾದ ಸಂಜೀವಿನಿ ಒಕ್ಕೂಟ ಗೋಳ್ತಮಜಲು ಇದರ ಸದಸ್ಯರು ಉಪಸ್ಥಿತರಿದ್ದರು.
ಕರ‍್ಯಕ್ರಮವನ್ನು ಶಾರೀರಿಕ ಶಿಕ್ಷಕರಾದ ಪುರುಷೋತ್ತಮ ಶ್ರೀಮಾನ್ ಮತ್ತು ರಮ್ಯಾ ಮಾತಾಜಿ ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ಧಾತ್ರಿ ವೈಯಕ್ತಿಕ ಗೀತೆಯನ್ನು ಹಾಡಿದಳು.
ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಂಕಲ್ಪ ಪ್ರತಿಜ್ಞೆಯನ್ನು ಮಾಡಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆಯನ್ನು ಮಾಡಿಸಲಾಯಿತು. ಕಾರ್ಯಕ್ರಮವನ್ನು ಶರಣ್ಯ, ಚೇತನ ನಿರೂಪಿಸಿ, ಭುವಿ, ಕಾವ್ಯಸ್ವಾಗತಿಸಿ, ಭೂಮಿಕ ಅನುಜ್ಞ ವಂದಿಸಿದರು.