ಭಾರತೀಯತೆಯನ್ನು ಶಿಕ್ಷಣದಲ್ಲಿ ಅಳವಡಿಸಿಕೊಂಡು, ದಿನನಿತ್ಯ ಮಾಡುವ ಪ್ರಾರ್ಥನೆಯ ಅರ್ಥವನ್ನು ತಿಳಿದುಕೊಂಡು, ಜೀವನದಲ್ಲಿ ಪುಸ್ತಕ ಓದುವ ಮೂಲಕ ಜ್ಞಾನವರ್ಧನೆಯನ್ನು ಮಾಡುವಂತೆ, ವಿಜ್ಞಾನ- ಗಣಿತದ ಜೊತೆಗೆ, ಚರಿತ್ರೆಯನ್ನು ಜೋಡಿಸಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ್ ಭಟ್‌ ಹೇಳಿದರು.

ಅವರು ಡಿ.30 ರಂದು ಕಲ್ಲಡ್ಕ, ಶ್ರೀರಾಮ ಹಿ.ಪ್ರಾ. ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆದ ʼಶ್ರೀರಾಮ ವರ್ತುಲ ಶೈಕ್ಷಣಿಕ ಕಾರ್ಯಗಾರʼ ಉದ್ಘಾಟಿಸಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿ ಮಾತನಾಡಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚೆನ್ನಪ್ಪ ಆರ್‌. ಕೋಟ್ಯಾನ್, ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಗೋಪಾಲ ಎಂ., ಪುಣಚ ಶ್ರೀ ದೇವಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ರಜನಿ, ಶ್ರೀರಾಮ ವರ್ತುಲ ಕಾರ್ಯಗಾರದ ಸಂಯೋಜಕ ವಿನೋದ್ ಶೆಟ್ಟಿ ಎ., ಹಾಗೂ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು.

ಶ್ರೀರಾಮ ವರ್ತುಲ ಶೈಕ್ಷಣಿ ಕಾರ್ಯಗಾರ ಮೂರು ಹಂತಗಳಲ್ಲಿ ನಡೆಯಿತು. ಮೊದಲನೆಯ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೇಪು ಸರಕಾರಿ ಪ್ರೌಢ ಶಾಲೆ ಕಲ್ಲಂಗಳ ನಿವೃತ್ತ ಮುಖ್ಯ ಶಿಕ್ಷಕ ರಮೇಶ್ ಬಾಯಾರು ಅವರು “ವಿದ್ಯಾರ್ಥಿ- ಶಿಕ್ಷಕ – ಸಮಾಜ” ಎಂಬ ವಿಷಯದ ಬಗ್ಗೆ ತಿಳಿಸಿಕೊಟ್ಟರು.

ಎರಡನೆಯ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಡಬ ತಾಲೂಕಿನ ಪ್ರಥಮ ಮನ:ಶಾಸ್ತ್ರಜ್ಞರು ಶ್ರದ್ಧಾ ಲಲಿತ್‌ ರೈ, ಅವರು “ಅನಪೇಕ್ಷಿತ ವರ್ತನೆ ಮತ್ತು ಪರಿಹಾರ“ ಎಂಬ ವಿಷಯದ ಬಗ್ಗೆ ಚಟುವಟಿಕೆಯ ಮೂಲಕ ತಿಳಿಸಿಕೊಟ್ಟರು.

ಮೂರನೇಯ ಅವಧಿಯಲ್ಲಿ “ವರ್ತಮಾನದ ವಿಷಮತೆಗಳು” ಎಂಬ ವಿಷಯದ ಕುರಿತು, ಶ್ರೀ ಸುಬ್ರಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಜಿರೆ ತಾಲೂಕು ಕಾರ್ಯವಾಹ ಆಗಿರುವ ಶ ಪ್ರಜ್ವಲ್‌ ಅವರು ಮಾಹಿತಿ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಪುತ್ತೂರು (ರಿ), ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ್ ನಾಯಕ್‌ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀರಾಮ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಶ್ರೀರಾಮ ಸೆಕಂಡರಿಸ್ಕೂಲ್ ಕಲ್ಲಡ್ಕ ಉಪಪ್ರಾಂಶುಪಾಲ ತಿರುಮಲೇಶ್ವರ ಪ್ರಶಾಂತ್ , ಪುಣಚ ಶ್ರೀದೇವಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಲೋಕೇಶ್, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು.

ಶಿಕ್ಷಕಿ ದೇವಕಿ ವೈಯಕ್ತಿಕ ಗೀತೆ ಹಾಡಿದರು, ಅನ್ನಪೂರ್ಣ ಎನ್. ಭಟ್‌ ಸ್ವಾಗತಿಸಿ, ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.