ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಯಲ್ಲಿ ರಾಮನಾಮ ತಾರಕ ಜಪ ಮಂತ್ರ ಮತ್ತು ಸರಸ್ವತಿ ವಂದನಾ ಕಾರ್ಯಕ್ರಮ ಫೆ.16ರಂದು ನಡೆಯಿತು.
ಸುಳ್ಯದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಅಕಾಡೆಮಿ ಆಫ್ ಲಿಬರಲ್‌ಎಜುಕೇಶನ್‌ನ ಅಧ್ಯಕ್ಷ ಡಾ. ಕೆ.ವಿಚಿದಾನಂದ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಬಳಿಕ ಮಾತನಾಡಿ
ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಕಲಿತ ವಿದ್ಯಾರ್ಥಿಗಳ ಸಂಸ್ಕಾರ ಶಿಸ್ತು ನಾಳಿನ ಭವಿಷ್ಯಕ್ಕೆ ಪೂರಕ ಅಂಶ ಆಗುತ್ತದೆ ಎಂದರು. ಮಕ್ಕಳಲ್ಲಿರುವ ಸಂಸ್ಕೃತಿಯನ್ನು ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದರು.
ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ.ಪ್ರಭಾಕರ್ ಭಟ್, ಸುಳ್ಯದ ಅಕಾಡೆಮಿ ಆಫ್ ಲಿಬರಲ್‌ಎಜುಕೇಶನ್‌ನ ಕಾರ್ಯದರ್ಶಿಯಾದ ಶ್ರೀ ಅಕ್ಷಯ ಕೆ.ಸಿ., ಕಟೀಲು ಜ್ಞಾನರತ್ನ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀ ಭಾಸ್ಕರ್‌ದೇವಸ್ಯ ಹಾಗೂ ಶ್ರೀರಾಮ ಪ್ರೌಢಶಾಲೆಯ ಮುಖ್ಯ ಗುರುಗಳಾದ ಗೋಪಾಲ ಎಂ. ಉಪಸ್ಥಿತರಿದ್ದರು.