ಕಲ್ಲಡ್ಕ ಶ್ರೀ ರಾಮ ವಿದ್ಯಾಸಂಸ್ಥೆಯಲ್ಲಿ ಜ.25ರಂದು ರಾಷ್ಟ್ರೀಯ ಮತದಾನ ದಿನದ ಅಂಗವಾಗಿ ಕಾಲೇಜಿನ ಮತದಾರರ ಸಾಕ್ಷಾರತಾ ಘಟಕ ಮತ್ತು ಭಾರತೀಯ ಜನತಾ ಪಾರ್ಟಿ ಇದರ ಸಹಯೋಗದೊಂದಿಗೆ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು.

ವಿದ್ಯಾರ್ಥಿಗಳು ಬಿಜೆಪಿ ಅಧ್ಯಕ್ಷರಾದ ಜೆ. ಪಿ. ನಡ್ಡ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯುವ ಮತದಾರನ್ನು ಉದ್ದೇಶಿಸಿ ಮತದಾನದ ಮಹತ್ವದ ಕುರಿತು ಆಡಿದ ಮಾತುಗಳನ್ನು ಪರದೆಯ ಮೂಲಕ ವೀಕ್ಷಿಸಿದರು.

ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಬಂಟ್ವಾಳ ಬಿಜೆಪಿ ಯುವಮೋರ್ಚಾ ಅಧ್ಯಕ್ಷಕಿಶೋರ್ ಪಲ್ಲಿಪಾಡಿ, ಹಿರಿಯರಾದ ಚೆನ್ನಪ್ಪ ಕೋಟ್ಯಾನ್, ಯುವಮೋರ್ಚಾ ದಕ್ಷಿಣ ಕನ್ನಡ, ಜಿಲ್ಲಾ ಕಾರ್ಯದರ್ಶಿ ವರುಣ್ ರಾಜ್, ಕಾವಳ ಮೂಡುರು ಗ್ರಾಮ ಪಂಚಾಯತ್‌ ಅಧ್ಯಕ್ಷ ಅಜಿತ್ ಶೆಟ್ಟಿ , ಬಂಟ್ವಾಳ ಯುವಮೋರ್ಚಾದ ದಿನೇಶ್ ದಂಬೆದಾರ್, ಪದವಿ ಕಾಲೇಜಿನ ಪ್ರಾಂಶುಪಾಲ ಶ್ರೀ ಕೃಷ್ಣಪ್ರಸಾದ್ ಕಾಯರಕಟ್ಟೆ ಉಪಸ್ಥಿತರಿದ್ದರು.