ಕಲ್ಲಡ್ಕ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ದಿನಗಳ “ಶಾಲಾ ಉತ್ಸವ – 2023” ಕಾರ್ಯಕ್ರಮಕ್ಕೆ ನಿವೃತ ಶಿಕ್ಷಕಿ ಸುಮಿತ್ರ ಕೆ ಆರ್. ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.
ಕಲ್ಲಡ್ಕ ಕೆ.ಟಿ. ಹೋಟೆಲ್ ಲಕ್ಷ್ಮಿ ಗಣೇಶ್ ಮಾಲಕ ರಾಜೇಂದ್ರ ಹೊಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಶಾರೀರಿಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯರುಗಳಾದ ಲಿಖಿತ ಆರ್ ಶೆಟ್ಟಿ, ಲೀಲಾವತಿ, ಯೂಸುಫ್ ಹೈದರ್, ಅಬ್ದುಲ್ ಅಬ್ದುಲ್ ಹಮೀದ್, ವಿಘ್ನೇಶ್ವರ ಬೋರ್ ವೆಲ್ ಮಾಲಕ ವಿಗ್ನೇಶ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ನರಸಿಂಹ ಕೆ., ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯತಿನ್ ಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಧುಸೂದನ್ ಐತಾಳ್, ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಜಗದೀಶ್, ಕಲ್ಲಡ್ಕ ವಲಯ ಶಿಕ್ಷಣ ಸಂಯೋಜಕ ಪ್ರತಿಮಾ ವೈ.ವಿ., ಐ. ಆರ್.ಟಿ. ಸುರೇಖಾ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಅಬೂಬಕರ್ ಅಶ್ರಫ್ ಸ್ವಾಗತಿಸಿ, ಹಿರಿಯ ಶಿಕ್ಷಕಿ ಕಸ್ತೂರಿ ವಂದಿಸಿದರು. ಶಿಕ್ಷಕಿ ಸೌಮ್ಯ ರಾವ್ ಕಾರ್ಯಕ್ರಮ ನಿರ್ವಹಿಸಿದರು.