ಕಲ್ಲಡ್ಕ : ಕುದ್ರೆಬೆಟ್ಟಿನಲ್ಲಿ ಡಾ. ಪ್ರಮೋದ್ ಶೆಟ್ಟಿ, ಕೊಡ್ಯೇಲುಗುತ್ತು ಪ್ರವೀಣ್ ಶೆಟ್ಟಿ ಹಾಗೂ ಕಕ್ಕೆಮಜಲು ಕರುಣಾಕರ ಶೆಟ್ಟಿ ಅವರ ಮಾಲಕತ್ವದ ಸಸ್ಯಾಹಾರಿ “ಹೊಟೇಲ್ ಸಮುದ್ರ” ಅದ್ಧೂರಿಯಾಗಿ ಶುಭಾರಂಭಗೊಂಡಿತು.

ಸರೋಜಿನಿ ಶೀನ ಶೆಟ್ಟಿ ಕಕ್ಕೆಮಜಲ್ ದಂಪತಿಗಳು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ನಂತರ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಭಜನಾ ಸೇವೆ ಬಳಿಕ ಅನ್ನಪ್ರಸಾದ ವಿತರಣೆ ನಡೆಯಲಿತು.

ಸಂಜೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 3 ನೇ ಮೇಳದವರಿಂದ “ಶ್ರೀದೇವಿ ಮಹಾತ್ಮೆ” ಎಂಬ ಯಕ್ಷಗಾನ ಬಯಲಾಟ ನಡೆಯಿತು.

ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ ,ರುಕ್ಮಯ ಪೂಜಾರಿ ಏಳ್ತೀಮಾರ್ ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸಿ ಶುಭ ಹಾರೈಸಿದರು.

ವಾಹನ ನಿಲುಗಡೆಗೆ ವಿಶಾಲ ಸ್ಥಳವಕಾಶ ಇರುವ ಈ ಸಸ್ಯಹಾರಿ ಹೋಟೆಲ್ ಜನವರಿ 21ರಿಂದ ಶುಚಿ,ರುಚಿ ತಿಂಡಿಗಳೊಂದಿಗೆ ಗ್ರಾಹಕರ ಸೇವೆಗೆ ಲಭ್ಯವಿರಲಿದೆ.