ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ಬೊಳಂತೂರು ಒಕ್ಕೂಟದ ಧರ್ಮ ಶಾಂತಿ ಸ್ವ ಸಹಾಯ ಸಂಘದ 18 ನೇ ವಾರ್ಷಿಕೋತ್ಸವ ಕಾರ್ಯಕ್ರಮ ಒಕ್ಕೂಟದ ಅಧ್ಯಕ್ಷರಾದ ಸೀತಾ ಆಚಾರ್ಯ ಅವರ ಅಧ್ಯಕ್ಷತೆ ಯಲ್ಲಿ ಜರಗಿತು.
ರಾಮಚಂದ್ರ ಆಚಾರ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣಾ ಶೆಟ್ಟಿ, ಒಕ್ಕೂಟ ಸೇವಾ ಪ್ರತಿನಿಧಿ ಲೀಲಾವತಿ, ಸ್ವ ಸಹಾಯ ಸಂಘ ದ ಸದಸ್ಯರು ಉಪಸ್ಥಿತರಿದ್ದರು.
ಹರಿನಣಾಕ್ಷಿ ರಾಮಯ್ಯ ಆಚಾರ್ಯ ಸ್ವಾಗತಿಸಿ, ವಾಣಿ ಕಿರಣ್ ವಂದಿಸಿದರು.