ಕಲ್ಲಡ್ಕ ಶ್ರೀರಾಮ ಸೆಕೆಂಡರಿ ಸ್ಕೂಲ್‌ನ ನೂತನ ಭವನ ‘ಅಹಲ್ಯಾ’ವು ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಅವರ ದಿವ್ಯ ಹಸ್ತದಿಂದ ಲೋಕಾರ್ಪಣೆಗೊಂಡಿತು.

ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

ನಂತರ 2024-25ನೇ ಸಾಲಿನ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಆಗತ ಸ್ವಾಗತ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮಕ್ಕೆ ಬಂದಿರುವ ಅತಿಥಿ ಅಭ್ಯಾಗತರು ಅಗ್ನಿಹೋತ್ರಕ್ಕೆ ಅಗ್ನಿ ಸ್ಪರ್ಶ ಮಾಡಿ ಘೃತಾಹುತಿ ನೀಡಿ, ದೀಪ ಪ್ರಜ್ವಲನೆ ಮತ್ತು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ ನಡೆದಿದ್ದು, ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ತಿಲಕಧಾರಣೆ ಮಾಡುವುದರ ಮೂಲಕ ಸ್ವಾಗತಿಸಲಾಯಿತು.

ವಿದ್ಯಾಕೇಂದ್ರದ ಸಂಸ್ಥಾಪಕರು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್‌ ಕಲ್ಲಡ್ಕ ಅವರು ಮಾತನಾಡಿದರು

ವಿದ್ಯಾಕೇಂದ್ರದ ಸಂಸ್ಥಾಪಕರು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್‌ ಕಲ್ಲಡ್ಕ ಅವರು ಮಾತನಾಡಿ ಶಿಕ್ಷಣ ಸಂಸ್ಕಾರಯುತವಾಗಿರಬೇಕು, ಶ್ರೀರಾಮನಂತಹ ಆದರ್ಶ ವ್ಯಕ್ತಿಯನ್ನು ಪಾಲಿಸಬೇಕು.

‘ಅಹಲ್ಯಾ’ ನೂತನ ಭವನದ ಲೋಕಾರ್ಪಣೆಯ ಕುರಿತು’ ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಣಿಯಾಗಿದ್ದು ಕೊಂಡು ಜವಾಬ್ದಾರಿ ನಿರ್ವಹಿಸಿದಂತಹ, ಅನೇಕ ದೇವಾಲಯಗಳ ಪುನರ್ ನಿರ್ಮಾಣ ಮಾಡಿದ ಅಹಲ್ಯಾ ಹೋಳ್ಕರ್ ಹಾಗೂ ಭಾರತೀಯ ವಿಜ್ಞಾನಿಯಾದ ಜಗದೀಶ ಚಂದ್ರ ಬೋಸ್‌ ಅವರ ಹೆಸರನ್ನು ಇಡುವುದರ ಮೂಲಕ ಪ್ರಾರಂಭಿಸಲಾಗಿದೆ. ಭಾರತೀಯ ಚಿಂತನೆಗಳು ಮತ್ತು ಸಂಸ್ಕöÈತಿಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು” ಎಂದು ನುಡಿದರು.
ಶ್ರೀಶ್ರೀಶ್ರೀ ಸಚ್ಚಿದಾನಂದ ಸ್ವಾಮೀಜಿಯವರು ಆಶೀರ್ವಚನದಲ್ಲಿ ಶ್ರೀರಾಮ ವಿದ್ಯಾಕೇಂದ್ರವುಜಗತ್ತಿಗೆ ಮಾದರಿಯಾಗಿರುವ ಶಿಕ್ಷಣ ಸಂಸ್ಥೆಯಾಗಿದೆ. ವಿದ್ಯಾಋಣವನ್ನುತೀರಿಸಲುಅಸಾಧ್ಯ. ಸಂಸ್ಕಾರವನ್ನುಧರ್ಮವನ್ನು ಆಧರಿಸಿದಂತಹ ಶಿಕ್ಷಣವನ್ನು ನಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.

ಕಲ್ಲಡ್ಕ ಶ್ರೀರಾಮ ಸೆಕೆಂಡರಿ ಸ್ಕೂಲ್‌ನ ನೂತನ ಭವನ ‘ಅಹಲ್ಯಾ, ಉದ್ಘಾಟನೆ

ಇನ್ನೋರ್ವ ಅತಿಥಿಯಾದ ಶ್ರೀ ಅರ್ಜುನ್‌ರಾವ್ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ, ಕ್ರೆಡೈ ಮಂಗಳೂರು ಅವರ ಮಾತುಗಳಲ್ಲಿ “ಮೌಲ್ಯಯುತ ಶಿಕ್ಷಣವು ಶಿಕ್ಷಣದ ಪ್ರಮುಖ ಹಂತವಾಗಿದ್ದುಅದು ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿ ಬೆಳೆಸುತ್ತದೆ ಎಂದು ತಿಳಿಸಿದರು.

ದೇವೇಂದ್ರ ಬಿ. ಬನ್ನನ್‌ಉಪಾಧ್ಯಕ್ಷರು-ಕಟೀಲುಯಕ್ಷ ಕಲಾ ವೇದಿಕೆ ವಸಾಯಿ, ಕೆ. ಕೃಷ್ಣಾನಂದ ಕಾಮತ್‌ವ್ಯಾಪಾರ ಮುಖ್ಯಸ್ಥ, ಬೆಸ್ಟ್ ಸೆಲ್ಲರ್ಸ್ಅಪ್ಯಾರಲ್ ಪ್ರೆ ಲಿ. ಮಣಿಪಾಲ್, ರಾಷ್ಟ್ರ ಸೇವಿಕಾ ಸಮಿತಿಯ ದಕ್ಷಿಣ ಪ್ರಾಂತ ಮಾರ್ಗದರ್ಶಕ ಮಂಡಳಿಯ ಸದಸ್ಯೆ, ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್‌ಎನ್, ಸೆಕೆಂಡರಿ ಸ್ಕೂಲ್‌ನ ಉಪಪ್ರಾಂಶುಪಾಲ ತಿರುಮಲೇಶ್ವರ ಪ್ರಶಾಂತರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

2024-25 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ವಾಸವಿ ಮತ್ತು ತೀರ್ಥ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮವು ಮನಾಲಿ ನಿರೂಪಿಸಿ, ಕುಮಾರಿ ವೈಷ್ಣವಿ ಸ್ವಾಗತಿಸಿ, ಕುಮಾರಿ ಗೌತಮಿ ವಂದಿಸಿ, ಶಾಂತಿಮಂತ್ರದೊಂದಿಗೆ ಕೊನೆಗೊಂಡಿತು.