ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಸುಳ್ಯ, ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಚಿಕಿತ್ಸಾಲಯದ ವತಿಯಿಂದ ಮಕ್ಕಳ ಉಚಿತ ದಂತ ಚಿಕಿತ್ಸಾ ಕಾರ್ಯಕ್ರಮ ಮಾ.27ರಂದು ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|ಪ್ರಭಾಕರ್ ಭಟ್ ಕಲ್ಲಡ್ಕ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ಮಾತನಾಡಿ “ಶ್ರೀರಾಮ ವಿದ್ಯಾಕೇಂದ್ರವು ಶಿಕ್ಷಣದ ಜೊತೆ ಉಚಿತ ಆರೋಗ್ಯ ತಪಾಸಣೆ, ಉಚಿತ ಕಣ್ಣಿನ ತಪಾಸಣೆ, ರಕ್ತದಾನದಂತಹ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಇಂದು ಮಕ್ಕಳಿಗೆ ಉಚಿತ ದಂತ ಚಿಕಿತ್ಸೆ ನೀಡಲಾಗುತ್ತಿದ್ದು, ಹಲ್ಲಿನ ಆರೋಗ್ಯ ಭಾರಿ ಪ್ರಮುಖವಾಗಿದೆ. ಆರೋಗ್ಯ ಚೆನ್ನಾಗಿರಬೇಕಾದರೆ, ಉತ್ತಮ ಆಹಾರ ಸೇವನೆ ಬೇಕು, ಆಹಾರ ಸೇವನೆಯು ಬಾಯಿಯ ಮೂಲಕ ಆಗುತ್ತಿದ್ದು, ಸರಿಯಾಗಿ ಜಗಿಯಲು ಹಲ್ಲಿನ ಆರೋಗ್ಯ ಅತ್ಯಾವಶ್ಯಕವಾಗಿದೆ. ಒಳಗಿನ ಆರೋಗ್ಯದ ಜೊತೆಗೆ, ಹೊರಗಿನ ಮುಖದ ಚಿತ್ರಣಕ್ಕೂ ಹಲ್ಲಿನ ಆರೋಗ್ಯ ತುಂಬಾ ಮುಖ್ಯವಾಗಿದೆ. ಇಂದು ಕುರುಂಜಿ ವೆಂಕಟರಮಣರವರ ವಿದ್ಯಾಸಂಸ್ಥೆಯಿಂದ ಈ ಕಾರ್ಯ ನಡೆಯುತ್ತಿದೆ. ಕೆ.ವಿ.ಜಿ ವಿದ್ಯಾಸಂಸ್ಥೆಯು ಜಿಲ್ಲೆಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಮೊದಲಿಗೆ ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಚಿಕಿತ್ಸಾಲಯದ ವೈದ್ಯರಾದ ಡಾ| ಅಮೋಘ ಭಾರತ ಮಾತೆಗೆ ದೀಪ ಬೆಳಗಿಸಿ, ಪುರ್ಷ್ಪಾಚನೆ ಮಾಡಿದರು.
ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಚಿಕಿತ್ಸಾಲಯದ ವೈದ್ಯರಾದ ಡಾ| ಕೃಷ್ಣಮೂರ್ತಿ , “ಹಲ್ಲಿನ ಉಪಯೋಗ ತುಂಬಾ ಇದೆ. ದಂತ ಆರೋಗ್ಯದ ಬಗ್ಗೆ ಪ್ರಾಮುಖ್ಯತೆ ನೀಡಬೇಕು. ಇದರ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯ ಮಾಡುತ್ತಿದ್ದೇವೆ. ಶ್ರೀರಾಮ ವಿದ್ಯಾಕೇಂದ್ರದಲ್ಲಿ ಈ ಶಿಬಿರ ಹಮ್ಮಿಕೊಂಡಿರುವುದಕ್ಕೆ ಸಂತಸವಾಗಿದೆ” ಎಂದರು.
ವೇದಿಕೆಯಲ್ಲಿ ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಚಿಕಿತ್ಸಾಲಯದ ವೈದ್ಯರಾದ ಡಾ| ಆಲ್ವಿನ್, ಡಾ| ಅಮೋಘ, ಅಮ್ಟೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶರತ್ ಕುಮಾರ್, ವಿಜಯ ಶರತ್ ಕುಮಾರ್, ಶಾಲಾ ಸಂಚಾಲಕ ವಸಂತ ಮಾಧವ, ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯೆ ಡಾ| ಕಮಲಾ ಪ್ರಭಾಕರರ ಭಟ್ ಹಾಗೂ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಸುಶ್ಮಿತಾ ಭಟ್ ಸ್ವಾಗತಿಸಿ, ಚಿನ್ಮಯ್ ಎನ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿಯರಾದ ವೈಷ್ಣವಿ ಕಡ್ಯ ಕಾರ್ಯಕ್ರಮ ನಿರೂಪಿಸಿದರು.